ಮಂಗಳವಾರ, ಜನವರಿ 28, 2020
19 °C

ಜೆಎನ್‌ಯು ಉಪ ಕುಲಪತಿಯೇ ಹಲ್ಲೆ ಹಿಂದಿನ ಮಾಸ್ಟರ್‌ ಮೈಂಡ್‌; ಕಾಂಗ್ರೆಸ್‌ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಜನವರಿ 5ರಂದು ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಗುಂಪು ಹಲ್ಲೆಯ ಹಿಂದೆ ಉಪಕುಲಪತಿ ಜಗದೀಶ್‌ ಕುಮಾರ್‌ ಅವರ ಕೈವಾಡವಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. 

ಗುಂಪು ಹಲ್ಲೆಯ ನೈಜತೆ ತಿಳಿಯಲು ಸತ್ಯ ಶೋಧನಾ ಸಮಿತಿ ರಚಿಸಿದ್ದ ಕಾಂಗ್ರೆಸ್‌ ಜಗದೀಶ್‌ ಕುಮಾರ್‌ ಅವರನ್ನು ಘಟನೆ ಹಿಂದಿನ ‘ಮಾಸ್ಟರ್‌ ಮೈಂಡ್‌’ ಎಂದು ಕರೆದಿದೆ. ದಾಳಿಕೋರರ ಜೊತೆ ಜಗದೀಶ್‌ ಕುಮಾರ್ ಸಂಚು ರೂಪಿಸಿದ್ದು, ಈ ಕೂಡಲೇ ಅವರನ್ನು ಉಪ ಕುಲಪತಿ ಸ್ಥಾನದಿಂದ ವಜಾಗೊಳಿಸಬೇಕೆಂದು ಕಾಂಗ್ರೆಸ್‌ ಒತ್ತಾಯಿಸಿದೆ. 

ಇದನ್ನೂ ಓದಿ: ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ; ಅಹೋರಾತ್ರಿ ಪ್ರತಿಭಟನೆ

ಮುಸುಕುದಾರಿ ದಾಳಿಕೋರರಿಗೆ ಜೆಎನ್‌ಯು ಕ್ಯಾಂಪಸ್‌ನಲ್ಲಿ  ನುಗ್ಗಲು ದೆಹಲಿ ಪೊಲೀಸರು ಅವಕಾಶ ನೀಡಿದ್ದಾರೆ ಎಂದು  ಕಾಂಗ್ರೆಸ್‌ ಸತ್ಯ ಶೋಧನಾ ಸಮಿತಿ ಗಂಭೀರ ಆರೋಪ ಮಾಡಿದೆ. 

ಇದನ್ನೂ ಓದಿ: ಜೆಎನ್‌ಯು ಕುಲಪತಿ ರಾಜೀನಾಮೆಗೆ ಆಗ್ರಹ

ನವದೆಹಲಿಯ ಪ್ರತಿಷ್ಠಿತ ವಿಶ್ವವಿದ್ಯಾಲಯ ಜೆಎನ್‌ಯುನಲ್ಲಿ ಕಳೆದ ಭಾನುವಾರ ಮುಸುಕು ದಾರಿಗಳಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆಯು ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. 

ಇದನ್ನೂ ಓದಿ: ಜೆಎನ್‌ಯು ಹಿಂಸಾಚಾರ: ವಾಟ್ಸ್ಆ್ಯಪ್ ಗುಂಪಿನ 37 ಜನರ ಗುರುತು ಪತ್ತೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು