ಬುಧವಾರ, ಜನವರಿ 29, 2020
27 °C

ಸರ್ಕಾರವನ್ನು ಟೀಕಿಸಿದ್ದಕ್ಕೆ, ಪ್ರಶಂಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸರ್ಕಾರದ ವಿರುದ್ಧ ಮಾತನಾಡಲು ಜನರು ಹೆದರುತ್ತಿದ್ದಾರೆ ಎಂದು ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ನಿರ್ಮಲಾ ಸೀತಾರಾಮನ್ ಅವರಿದ್ದ ವೇದಿಕೆಯಲ್ಲೇ ಹೇಳಿದ್ದ ಬಜಾಜ್‌ ಗ್ರೂಪ್‌ನ ಮುಖ್ಯಸ್ಥ ರಾಹುಲ್ ಬಜಾಜ್ ಅವರನ್ನು ಕಾಂಗ್ರೆಸ್‌ ಹೊಗಳಿದೆ.

‘ವಿರೋಧ ಪಕ್ಷಗಳನ್ನೇ ಟೀಕಿಸುವ ಕಾರ್ಪೊರೇಟ್‌ ಉದ್ಯಮಿಗಳ ಗುಂಪಿನಲ್ಲಿ, ಒಬ್ಬರಾದರೂ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ. ಪ್ರಭುತ್ವದ ಎದುರು ಸತ್ಯವನ್ನು ನುಡಿಯುವ ಕೆಲಸವನ್ನು ರಾಹುಲ್ ಬಜಾಜ್ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.

ಮುಂಬೈನಲ್ಲಿ ಶನಿವಾರ ರಾತ್ರಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಹುಲ್ ಬಜಾಜ್ ಮಾತನಾಡಿದ್ದರು. ‘ಸರ್ಕಾರವನ್ನು ಟೀಕಿಸಲು ಜನರು ಹೆದರುತ್ತಿದ್ದಾರೆ. ಟೀಕೆಗಳನ್ನು ಈ ಸರ್ಕಾರ ಸ್ವಾಗತಿಸುತ್ತದೆ ಎಂಬ ವಿಶ್ವಾಸ ಯಾರಲ್ಲೂ ಇಲ್ಲ’ ಎಂದು ಅವರು ಹೇಳಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು