ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾವೈರಸ್ ಲಾಕ್‍ಡೌನ್: ಬೀದಿನಾಯಿಗಳಿಗೆ ಆಹಾರ ನೀಡುವ ವಿದ್ಯಾರ್ಥಿನಿಗೆ ಶ್ಲಾಘನೆ

Last Updated 8 ಏಪ್ರಿಲ್ 2020, 10:27 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಲಾಕ್‌ಡೌನ್ ಆಗಿರುವ ಹೊತ್ತಲ್ಲಿ ಜನರು ಪರಸ್ಪರ ಸಹಾಯ ಮಾಡುತ್ತಿರುವುದನ್ನು ನೋಡಿದ್ದೇವೆ. ಮನೆಯಿಂದ ಹೊರಗೆ ಹೋಗಲಾರದೆ ಚಡಪಡಿಸುವವರು ಒಂದೆಡೆಯಾದರೆ ಒಂದು ಹೊತ್ತು ಊಟಕ್ಕಾಗಿ ಕಷ್ಟಪಡುವ ಎಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಮನುಷ್ಯನಿಗೆ ಹಸಿವೆ ಆದರೆ ಹಸಿವಾಗುತ್ತಿದೆ ಎಂದು ಬಾಯ್ಬಿಟ್ಟು ಕೇಳಬಹುದು. ಆದರೆ ಪ್ರಾಣಿಗಳು? ಅವುಗಳಿಗೂ ಬದುಕಲು ಆಹಾರದ ಅಗತ್ಯವಿದೆ. ಈ ರೀತಿ ಪ್ರಾಣಿಗಳಿಗೆ ಆಹಾರ ನೀಡುತ್ತಿರುವವರ ಪೈಕಿ ದೆಹಲಿಯ ವಿಭಾ ತೋಮರ್ ಸುದ್ದಿಯಲ್ಲಿದ್ದಾರೆ.

ದೆಹಲಿಯ ವೆಟರ್ನಿಟಿ ವಿದ್ಯಾರ್ಥಿನಿ ವಿಭಾ ತೋಮರ್ ಲಾಕ್‍ಡೌನ್ ಹೊತ್ತಲ್ಲಿ ಬೀದಿ ನಾಯಿಗಳಿಗೆ ಅನ್ನ ಹಾಕುವ ಕೆಲಸ ಮಾಡುತ್ತಿದ್ದು,ಈಕೆಯ ಸೇವಾ ಮನೋಭಾವವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ನನಗೆ ಬಾಲ್ಯದಿಂದಲೇ ಪ್ರಾಣಿಗಳೆಂದರೆ ಪ್ರೀತಿ, ಅವುಗಳಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ ಎಂದು ಎಎನ್‌ಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ ವಿಭಾ ಹೇಳಿದ್ದಾರೆ. ಲಾಕ್‍ಡೌನ್ ಹೊತ್ತಲ್ಲಿ ಜನರು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ವೇಳೆ ರೆಸ್ಟೊರೆಂಟ್ ಅಥವಾ ಮನೆಯಿಂದ ಸ್ವಲ್ಪ ಅನ್ನವನ್ನು ತಂದ ಬೀದಿ ನಾಯಿಗಳಿಗೆ ನೀಡಿದರೆ ಉಪಕಾರವಾದೀತು.

ಕೊರೊನಾ ವೈರಸ್ ಹರಡುತ್ತಿರುವಾಗ ಜನರು ಮನೆಯೊಳಗಿರುತ್ತಾರೆ. ಆದರೆ ಪ್ರಾಣಿಗಳು ತುಂಬಾ ಕಷ್ಟ ಅನುಭವಿಸುತ್ತಿವೆ. ಮೊದಲು ಜನರು ಬಂದು ನಾಯಿಗಳಿಗೆ ಏನಾದರೂ ತಿನ್ನಲು ಕೊಡುತ್ತಿದ್ದರು. ಆದರೆ ಈಗ ಅವರೇ ಕಷ್ಚದಲ್ಲಿದ್ದಾರೆ. ಹಾಗಾಗಿ ನಾನೇ ಈ ಬೀದಿನಾಯಿಗಳಿಗೆ ಆಹಾರ ನೀಡುವ ಮೂಲಕ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ ಎಂದು ವಿಭಾ ಹೇಳಿದ್ದಾರೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT