ಬುಧವಾರ, ಮೇ 27, 2020
27 °C

ಲಾಕ್‌ಡೌನ್‌ ವೇಳೆ ಜನಿಸಿದ ಅವಳಿ ಮಕ್ಕಳಿಗೆ ಕೊರೊನಾ, ಕೋವಿಡ್‌ ಎಂದು ನಾಮಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಗಢ: ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಜಗತ್ತು ಹೋರಾಟ ಮಾಡುತ್ತಿರುವ ಸಮಯದಲ್ಲೇ ರಾಯಪುರ ಮೂಲದ ದಂಪತಿ ತಮಗೆ ಹುಟ್ಟಿದ ಅವಳಿ ಮಕ್ಕಳಿಗೆ 'ಕೋವಿಡ್‌' ಮತ್ತು 'ಕೊರೊನಾ' ಎಂದು ಹೆಸರಿಟ್ಟಿದ್ದಾರೆ. 

ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ದೇಶವನ್ನು ಲಾಕ್‌ಡೌನ್‌ ಮಾಡಿದ ಸಂದರ್ಭದಲ್ಲೇ ಈ ಅವಳಿ ಮಕ್ಕಳು ಜನಿಸಿದ್ದಾರೆ.

ಮಾರ್ಚ್‌-27 ರಂದು ಹುಟ್ಟಿದ ಅವಳಿಗಳಲ್ಲಿ ಗಂಡು ಮಗುವಿಗೆ 'ಕೋವಿಡ್‌' ಮತ್ತು ಹೆಣ್ಣು ಮಗುವಿಗೆ 'ಕೊರೊನಾ' ಎಂದು ನಾಮಕರಣ ಮಾಡಲಾಗಿದೆ. 

ಈ ಬಗ್ಗೆ ಮಾತನಾಡಿರುವ ಮಕ್ಕಳ ತಾಯಿ, 'ನನಗೆ ಅವಳಿ ಮಕ್ಕಳು ಜನಿಸಿದ್ದಾರೆ. ದೇಶ ಲಾಕ್‌ಡೌನ್‌ ಆದ ಸಂದರ್ಭದಲ್ಲಿ ಮಕ್ಕಳು ಜನಿಸುವ ಮೊದಲು ನಾವು ಹಲವು ಕಷ್ಟಗಳನ್ನು ಅನುಭವಿಸಿದೆವು. ಅದರ ಸ್ಮರಣೆಗಾಗಿ ಗಂಡು ಮಗುವಿಗೆ ಕೋವಿಡ್‌ ಮತ್ತು ಹೆಣ್ಣುಮಗುವಿಗೆ ಕೊರೊನಾ' ಎಂದು ಹೆಸರಿಟ್ಟೆವು 27 ವರ್ಷದ ಪ್ರೀತಿ ವರ್ಮಾ ತಿಳಿಸಿದ್ದಾರೆ. 

ಈ ದಂಪತಿ ಮೂಲತಃ ಉತ್ತರ ಪ್ರದೇಶದವರಾಗಿದ್ದು, ಚಂಡೀಗಢದ ಡಾ.ಬಿ.ಆರ್‌.ಅಂಬೇಡ್ಕರ್‌ ಮೆಮೋರಿಯಲ್‌ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. 
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು