ಭಾನುವಾರ, ಜೂಲೈ 5, 2020
27 °C
ಕೋವಿಡ್‌-19

ಸೋಂಕಿತರಿಗೆ ಸಂಪರ್ಕರಹಿತ ಆಹಾರ ವಿತರಣೆ: ವಿದ್ಯಾರ್ಥಿಯಿಂದ ರೋಬೋಟ್‌ ವಿನ್ಯಾಸ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮುಂಬೈ: ಕೊರೊನಾ ಸೋಂಕಿತರಿಗೆ ಸಂಪರ್ಕರಹಿತ ಔಷಧಿ ಮತ್ತು ಆಹಾರ ವಿತರಣೆ ಮಾಡಲು ಮಹಾರಾಷ್ಟ್ರದ ಏಳನೇ ತರಗತಿ ವಿದ್ಯಾರ್ಥಿಯೊಬ್ಬ ರೋಬೋಟ್‌ ಅನ್ನು ವಿನ್ಯಾಸಗೊಳಿಸಿದ್ದಾನೆ. 

ಸಾಯಿ ಸುರೇಶ್‌ ರಂಗ್ದಲ್‌ ಎನ್ನುವ ವಿದ್ಯಾರ್ಥಿ ವಿನ್ಯಾಸಗೊಳಿಸಿರುವ ರೋಬೋಟ್‌, ವಿಶೇಷವಾಗಿ ಕೊರೊನಾ ಸೋಂಕಿತರಿಗೆ ಔಷಧಿ ಮತ್ತು ಆಹಾರ ವಿತರಿಸಲು ಸಹಾಯವಾಗಲಿದೆ. 

ಸಾಯಿ ಸುರೇಶ್‌ ಪ್ರಕಾರ, 'ರೋಬೋಟ್ ಅನ್ನು ಬ್ಯಾಟರಿಯಿಂದ ನಿರ್ವಹಿಸಬಹುದು ಮತ್ತು ಸ್ಮಾರ್ಟ್‌ಫೋನ್ ಮೂಲಕ ನಿಯಂತ್ರಿಸಬಹುದು. ಇದು 1 ಕೆಜಿ ತೂಕದ ವಸ್ತುಗಳನ್ನು ಸಾಗಿಸಬಲ್ಲದು'

ಕೊರೊನಾ ಸೋಂಕಿತರೊಂದಿಗೆ ವೈದ್ಯಕೀಯ ಸಿಬ್ಬಂದಿಯ ದೈಹಿಕ ಸಂಪರ್ಕವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ರೋಬೋಟ್‌ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸಾಯಿ ಸುರೇಶ್‌ ತಿಳಿಸಿದ್ದಾನೆ.  
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು