ಶನಿವಾರ, ಮಾರ್ಚ್ 28, 2020
19 °C

ದೇಶದಲ್ಲಿ ಕೋವಿಡ್‌–19ನಿಂದ ಬಳಲುತ್ತಿದ್ದ 10 ಜನ ಗುಣಮುಖ, ಸೋಂಕಿತರ ಸಂಖ್ಯೆ 83

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಕೋವಿಡ್‌–19 ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ 83ಕ್ಕೆ ಏರಿಕೆಯಾಗಿದ್ದು 10 ಜನ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ.

ಕೋವಿಡ್‌–19 ಸೋಂಕಿನಿಂದ ಬಳಲುತ್ತಿದ್ದ 10 ಜನರು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ ಎಂದ ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. ಉತ್ತರ ಪ್ರದೇಶದಲ್ಲಿ ಐವರು ಹಾಗೂ ರಾಜಸ್ಥಾನ ಮತ್ತು ದೆಹಲಿಯ ತಲಾ ಒಬ್ಬರು ಮತ್ತು ಇತರೆ ಕಡೆ ಮೂವರು ರೋಗಿಗಳು ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗಳಿಗೆ ತೆರಳಿದ್ದಾರೆ.

ಗುಣಮುಖರಾಗಿರುವ ವ್ಯಕ್ತಿಗಳಿಗೆ 14 ದಿನಗಳ ಹಿಂದೆ ಪಾಸಿಟಿವ್‌ ವರದಿ ಬಂದಿದ್ದರಿಂದ ಪ್ರತ್ಯೇಕವಾಗಿರಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಮೇಲೆ ಮತ್ತೆ ಪರೀಕ್ಷೆ ನಡೆಸಿದಾಗ ವರದಿಯಲ್ಲಿ ನೆಗೆಟಿವ್‌ ಬಂದಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸೋಂಕು ತಗಲಿದ 14ನೇ ದಿನದಲ್ಲಿ ರೋಗಿಗಳ ಮಾದರಿಯನ್ನು ಎರಡು ಬಾರಿ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ ಕೊರೊನಾ ವೈರಸ್‌ ಪತ್ತೆಯಾಗದಿರುವುದರಿಂದ ಅವರನ್ನು ಮನೆಗೆ ಕಳುಹಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. 

ಇವನ್ನೂ ಓದಿ: 

ಕೊರೊನಾ ವೈರಸ್ - ಕೋವಿಡ್-19: ನಿಮ್ಮ ಎಲ್ಲ ಸಂದೇಹಗಳಿಗೆ ಉತ್ತರ ಇಲ್ಲಿದೆ

ಕೊರೊನಾ ವೈರಸ್ ಮ್ಯುಟೇಶನ್ ಆಗಿದೆಯೇ?: ಚಿಕಿತ್ಸೆ ಏನು? ಮತ್ತಷ್ಟು ಮಾಹಿತಿ

ಕೋವಿಡ್ ಕುರಿತು ವದಂತಿಗಳನ್ನು ನಂಬದಿರಿ: ಇಲ್ಲಿ ಓದಿ

ಕೊರೊನಾ ವೈರಸ್ ಹರಡುವ ವಿಧಾನ, ಲಕ್ಷಣಗಳು, ಮುನ್ನೆಚ್ಚರಿಕೆಗಳು

ಸೋಂಕಿನ ಬಗ್ಗೆ ಆತಂಕ ಬೇಡ, ಈ ವಿಧಾನಗಳನ್ನು ಅನುಸರಿಸಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು