ನವದೆಹಲಿ: ಭಾರತದಲ್ಲಿ ಕೊರೊನಾವೈರಸ್ ನಿಯಂತ್ರಿಸಲು ಲಾಕ್‍ಡೌನ್ ವಿಫಲವಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸೋಂಕು ಪ್ರಕರಣ ದ್ವಿಗುಣಗೊಳ್ಳುವ ದರವು 13 ದಿನಕ್ಕೆ ಇಳಿದಿದೆ. ಹಾಗಾಗಿ ಲಾಕ್‍ಡೌನ್ ಯಶಸ್ವಿಯಾಗಿದೆ ಎಂದಿದೆ.

ಅಮೆರಿಕ, ಫ್ರಾನ್ಸ್ ಮತ್ತು ಸ್ಪೇನ್‌ಗೆ ಹೋಲಿಸಿದರೆ ಭಾರತದಲ್ಲಿ ಲಾಕ್‍ಡೌನ್‌ನಿಂದಾಗಿ ಸಮಸ್ಯೆಯಾಗಿದ್ದು ಕಡಿಮೆ ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಕಾಂಗ್ರೆಸ್ ಯಾವ ರೀತಿ ರಾಜಕಾರಣ ಮಾಡುತ್ತಿದೆ ಎಂಬುದಕ್ಕೆ ರಾಹುಲ್ ಗಾಂಧಿ ಇವತ್ತು ನಡೆಸಿದ ಪತ್ರಿಕಾಗೋಷ್ಠಿಯೇ ಉದಾಹರಣೆ. ಲಾಕ್‍ಡೌನ್‌ಗಿಂತ ಮುಂಚೆ ಸೋಂಕು ಪ್ರಕರಣ ದುಪ್ಪಟ್ಟಗಾಗುವ ಅವಧಿ ಮೂರು ದಿನ ಆಗಿತ್ತು. ಲಾಕ್‌ಡೌನ್ ನಂತರ ಅದು 13 ದಿನ ಆಗಿದೆ. ಇದು ಭಾರತದ ಯಶಸ್ಸು ಎಂದಿದ್ದಾರೆಜಾವಡೇಕರ್.

ಇದನ್ನೂ ಓದಿ:ಲಾಕ್ಡೌನ್ ಉದ್ದೇಶ ವಿಫಲ, ಮುಂದಿನ ಯೋಜನೆಯೇನು: ಪ್ರಧಾನಿ ಮೋದಿಗೆ ರಾಹುಲ್ ಪ್ರಶ್ನೆ

ಲಾಕ್ಡೌನ್ ಘೋಷಿಸಿದಾಗ ಯಾಕೆ ಲಾಕ್‍ಡೌನ್ ಎಂದು ಪ್ರಶ್ನಿಸಿದ್ದ ಕಾಂಗ್ರೆಸ್, ಈಗ ಲಾಕ್‍ಡೌನ್ ಯಾಕೆ ಸಡಿಲಿಸುತ್ತಿದ್ದೀರಿ ಎಂದು ಕೇಳುತ್ತಿದೆ. ಎರಡು ರೀತಿಯ ಮಾತು ಅಂದರೆ ಇದೇ. ಇದು ಕಾಂಗ್ರೆಸ್‌ನ ಬೂಟಾಟಿಕೆ.3000 ರೈಲುಗಳಲ್ಲಿ ಸುಮಾರು 45 ಲಕ್ಷ ಕಾರ್ಮಿಕರನ್ನು ಅವರವರ ಮನೆಗೆ ಸೇರಿಸಲಾಗಿದೆ. ಇದು ಐತಿಹಾಸಿಕ ಸಂಗತಿ.

ಬಡವರಿಗೆ ನಗದು ನೀಡಬೇಕು ಎಂದು ರಾಹುಲ್ ಒತ್ತಾಯಿಸಿದ್ದರು.ಬಿಜೆಪಿ ಆಡಳಿತವಿರುವ ಉತ್ತರಪ್ರದೇಶ ಮತ್ತು ಕರ್ನಾಟಕದಲ್ಲಿ ವಲಸೆ ಕಾರ್ಮಿಕರಿಗೆ ನಗದು ನೀಡಲಾಯಿತು. ಕಾಂಗ್ರೆಸ್ ಅಧಿಕಾರದಲ್ಲಿರುವ ಯಾವ ರಾಜ್ಯ ಈ ರೀತಿ ಮಾಡಿದೆ?. ಕೇಂದ್ರ ಸರ್ಕಾರ ನೀಡಿದ ಸವಲತ್ತುಗಳ ಬಗ್ಗೆ ಉಲ್ಲೇಖಿಸಿದ ಸಚಿವರು 80 ಕೋಟಿಗಿಂತಲೂ ಹೆಚ್ಚು ಬಡವರಿಗೆ 5 ತಿಂಗಳು ಉಚಿತ ಪಡಿತರ ನೀಡಲಾಗಿದೆ. 9 ಕೋಟಿ ರೈತರಿಗೆ ₹2000 ಹಣ ವರ್ಗಾವಣೆ ಮಾಡಲಾಗಿದೆ. 20 ಕೋಟಿ ಮಹಿಳೆಯರಿಗೆ ತಲಾ ₹500 ಮತ್ತು 8 ಕೋಟಿ ಮನೆಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗಿದೆ. ಬಡವರಿಗೆ ₹7,500 ನೀಡಬೇಕೆಂದು ರಾಹುಲ್ ಗಾಂಧಿ ಹೇಳಿದ್ದರು. ಇದು ಅದಕ್ಕಿಂತಲೂ ಹೆಚ್ಚು.
ಜನರು ಈ ರೀತಿಯ ನಕಾರಾತ್ಮಕ ರಾಜಕೀಯವನ್ನು ಇಷ್ಟಪಡುವುದಿಲ್ಲ. ಇಡೀ ದೇಶವೇ ಒಂದೇ ದನಿಯಲ್ಲಿರುವಾಗ ಕಾಂಗ್ರೆಸ್ ಭಿನ್ನ ಸ್ವರವನ್ನೆತ್ತಿದೆ.ಹಾಗಾಗಿಯೇ ಅವರ ಪಕ್ಷ ಜನರಿಂದ ದೂರವಾಗಿರುವುದು ಎಂದಿದ್ದಾರೆ ಜಾವಡೇಕರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.