ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ 2 ಕಂಪನಿಗಳು ಪೂರೈಸಿದ್ದ ಪರೀಕ್ಷಾ ಕಿಟ್‌ಗಳು ಕಳಪೆ: ಬಳಸದಂತೆ ‌ಸೂಚನೆ

Last Updated 27 ಏಪ್ರಿಲ್ 2020, 14:04 IST
ಅಕ್ಷರ ಗಾತ್ರ

ನವದೆಹಲಿ: ಚೀನಾದ ಎರಡು ಕಂಪನಿಗಳಿಂದ ತರಿಸಿಕೊಳ್ಳಲಾಗಿರುವ ಕೊರೊನಾ ವೈರಸ್‌ (ಕೋವಿಡ್‌ 19) ಪರೀಕ್ಷಾ ಕಿಟ್‌ಗಳನ್ನು ಬಳಸದಂತೆಯೂ, ಅವುಗಳನ್ನು ಹಿಂದಿರುಗಿಸುವಂತೆಯೂ ಭಾರತದ ಅತ್ಯುನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆ ಐಸಿಎಂಆರ್‌ ರಾಜ್ಯಗಳಿಗೆ ತಿಳಿಸಿದೆ.

ಈ ಕುರಿತು ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ (ಐಸಿಎಂಆರ್‌), ಚೀನಾದ ‘ಗೌಂಗ್ಸೌ ವೋಂಡ್‌ಫೋ ಬಯೋಟಿಕ್‌’ ಮತ್ತು ‘ಝುಹೈ ಲಿವ್‌ಸನ್‌ ಡೈಯಗ್ನಸ್ಟಿಕ್‌’ ಪೂರೈಸಿರುವ ಪರೀಕ್ಷಾ ಕಿಟ್‌ಗಳನ್ನು ಪರೀಕ್ಷೆ ಮಾಡಲಾಗಿದ್ದು, ದೋಷ ಕಂಡು ಬಂದಿದೆ. ಮೊದಲು ತಿಳಿಸಿದ ಗುಣಮಟ್ಟಕ್ಕಿಂತಲೂ ಇವುಗಳ ಕಾರ್ಯಕ್ಷಮತೆ ಕಡಿಮೆ ಇದೆ,’ ಎಂದು ಐಸಿಎಂಆರ್‌ ತಿಳಿಸಿದೆ.

‘ಈ ಎರಡೂ ಕಂಪನಿಗಳಿಂದ ತರಿಸಿಕೊಳ್ಳಲಾಗಿದ್ದ ಕಿಟ್‌ಗಳ ಬಳಕೆಯನ್ನು ರಾಜ್ಯಗಳು ನಿಲ್ಲಿಸಬೇಕು. ಅವುಗಳನ್ನು ಪೂರೈಕೆದಾರರಿಗೇ ರವಾನಿಸಬೇಕು,’ ಎಂದು ಐಸಿಎಂಆರ್‌ ಹೇಳಿದೆ.

ಕಿಟ್‌ಗಳಿಗೆ ಸಂಬಂಧಿಸಿದಂತೆ ನಮಗೆ ಬಂದ ದೂರುಗಳ ಆಧಾರದ ಮೇಲೆ ಅವುಗಳ ಗುಣಮಪಟ್ಟ ಪರಿಶೀಲಿಸಲಾಯಿತು. ಅವುಗಳ ವೈಜ್ಞಾನಿಕ ಅಧ್ಯಯನ ನಡೆಸಿದಾಗಿ, ಕಾರ್ಯಕ್ಷಮತೆಯು ಕಳಪೆ ಇರುವುದು ಪತ್ತೆಯಾಗಿದೆ,’ ಎಂದು ಐಸಿಎಂಆರ್‌ ರಾಜ್ಯಗಳಿಗೆ ತನ್ನ ಸೂಚನೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT