ಸೋಮವಾರ, ಮೇ 25, 2020
27 °C

ಕೊರೊನಾ ಹಾವಳಿಗೆ ಬೆಚ್ಚಿಬಿದ್ದ ಮಹಾರಾಷ್ಟ್ರ: ಒಂದೇ ದಿನದಲ್ಲಿ 25 ಸೋಂಕಿತರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದಲ್ಲಿ ಒಂದೇ ದಿನ 25 ಕೊರೊನಾ ವೈರಸ್‌ ಸೋಂಕಿತರು ಮೃತಪಟ್ಟಿದ್ದಾರೆ. ಆ ಮೂಲಕ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ ಮೃತರಾದವರ ಸಂಖ್ಯೆ 97ಕ್ಕೆ ತಲುಪಿದೆ.  

ಕೊರೊನಾ ಸೋಂಕು ಸಂಬಂಧಿತ ಹೆಚ್ಚಿನ ಸಾವುಗಳು ಮುಂಬೈ-ಪುಣೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಭವಿಸಿವೆ. 

ಮಹಾರಾಷ್ಟ್ರದಲ್ಲಿ ಗುರುವಾರ 229 ಹೊಸ ಪ್ರಕರಣಗಳು ದಾಖಲಾಗುವ ಮೂಲಕ ಕೊರೊನಾ ಸೋಂಕು ಪೀಡಿತರ ಸಂಖ್ಯೆ 1,135ಕ್ಕೆ ತಲುಪಿದೆ. ಇದರಲ್ಲಿ ಶೇ.50 ರಷ್ಟು ಪ್ರಕರಣಗಳು ಮುಂಬೈ ಮಹಾನಗರ ವ್ಯಾಪ್ತಿಯಲ್ಲಿ ಕಂಡುಬಂದಿವೆ.

ಹೊಸದಾಗಿ ಮೃತಪಟ್ಟವರಲ್ಲಿ ಮುಂಬೈ ಮಹಾನಗರ ವ್ಯಾಪ್ತಿಯಲ್ಲಿ 9 ಮಂದಿ ಮತ್ತು ಪುಣೆ ಜಿಲ್ಲೆಯಲ್ಲಿ 14 ಜನರು ಸೇರಿದ್ದಾರೆ. ಸಾವಿಗೀಡಾದವರಲ್ಲಿ 12 ಮಂದಿ ಹಿರಿಯ ನಾಗರಿಕರಾಗಿದ್ದಾರೆ. 

ಮುಂಬೈ ನಗರದ ಧಾರಾವಿ ಮತ್ತು ವಾರ್ಲಿ ಪ್ರದೇಶಗಳು ಕೊರೊನಾ ವೈರಸ್‌ ಸೋಂಕಿನ ಹಾಟ್‌ಸ್ಪಾಟ್‌ಗಳಾಗಿ ಮಾರ್ಪಟ್ಟಿವೆ.

ಹದಗೆಡುತ್ತಿರುವ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಅಲ್ಲಿನ ಸರ್ಕಾರ ಕೆಲ ಪ್ರದೇಶಗಳಲ್ಲಿ ಕರ್ಪ್ಯೂ ಜಾರಿ ಮಾಡಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು