ಮಂಗಳವಾರ, ಸೆಪ್ಟೆಂಬರ್ 17, 2019
21 °C

ಕ್ಯಾನ್ಸರ್ ಕಾಯಿಲೆಗೆ ಗೋಮೂತ್ರ ಔಷಧಿ: ಕೇಂದ್ರ ಸಚಿವ ಅಶ್ವಿನಿ ಚೌಬೆ

Published:
Updated:

 ನವದೆಹಲಿ: ಕ್ಯಾನ್ಸರ್ ಸೇರಿದಂತೆ ಹಲವಾರು ರೋಗಗಳನ್ನು ಗುಣಪಡಿಸಲು ಬಳಸುತ್ತಿರುವುದು ಗೋಮೂತ್ರದಿಂದ ತಯಾರಿಸಿದ ಔಷಧಿಯಾಗಿದೆ. ಹಾಗಾಗಿ ಭಾರತ ಸರ್ಕಾರವು ಹಸುಗಳ ಸಂರಕ್ಷಣೆಗಾಗಿ  ಹೊಸ ಯೋಜನೆ ಸಿದ್ಧಪಡಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಅಶ್ವಿನಿ ಚೌಬೆ ಹೇಳಿದ್ದಾರೆ.

ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಗೋಮೂತ್ರದಿಂದ  ಹಲವಾರು ಔಷಧಿಗಳು ತಯಾರಾಗುತ್ತಿವೆ. ಕ್ಯಾನ್ಸರ್ ರೋಗವನ್ನು ಗುಣಪಡಿಸಲು ಬಳಸುವ ಔಷಧಿಯೂ ಗೋಮೂತ್ರದಿಂದಲೇ ತಯಾರಿಸಿದ್ದು.  ದೇಸೀ ಗೋವುಗಳ ರಕ್ಷಣೆಗಾಗಿ ಸರ್ಕಾರ ಯೋಜನೆ ಸಿದ್ದಪಡಿಸಿದೆ. ಈ ಬಗ್ಗೆ ಆಯುಷ್ ಸಚಿವಾಲಯ ಕಾರ್ಯ ಪ್ರವೃತ್ತವಾಗಿದೆ ಎಂದಿದ್ದಾರೆ. 

ಇದನ್ನೂ ಓದಿಗೋ ಉತ್ಪನ್ನಗಳ ಮಾರಾಟಕ್ಕಾಗಿ ಸ್ಟಾರ್ಟ್ ಅಪ್

ಕೃತಕ ಗರ್ಭಧಾರಣೆ ಮೂಲಕ ಹಸುಗಳ ಜನನ ಪ್ರಮಾಣ ಹೆಚ್ಚಿಸುವ ಬಗ್ಗೆ ಪಶುಸಂಗೋಪನ ವಿಭಾಗ ಕಾರ್ಯವೆಸಗುತ್ತಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಗುರುವಾರ ಹೇಳಿದ್ದರು. ಇದರಿಂದಾಗಿ ಗುಂಪುಹಲ್ಲೆ ಕೃತ್ಯಗಳಿಗೆ ಕಡಿವಾಣ ಹಾಕಬಹುದು ಎಂದ ಸಚಿವರು  ಪ್ರಾಥಮಿಕ ಹಂತದಲ್ಲಿ 30 ಲಕ್ಷ ಡೋಸ್ ಔಷಧಿಗಳನ್ನು ತಯಾರಿಸುವ ಗುರಿ ಕೇಂದ್ರ ಸರ್ಕಾರದ್ದು ಎಂದಿದ್ದಾರೆ.
 

Post Comments (+)