ಸೇನೆಯಿಂದ ಯುವಕರಿಗೆ ಸೈಕಲ್ ಯಾತ್ರೆ
ಜಮ್ಮು: ಸ್ಥಳೀಯ ಯುವಕರ ಜೊತೆ ಉತ್ತಮ ಸೌಹಾರ್ದ ಬೆಳೆಸುವ ಸಲುವಾಗಿ ಭಾರತೀಯ ಸೇನೆಯು ಇಲ್ಲಿನ ರಿಯಾಸಿ ಜಿಲ್ಲೆಯಲ್ಲಿ ಗುರುವಾರ ಸೈಕಲ್ ಯಾತ್ರೆ ಹಮ್ಮಿಕೊಂಡಿತ್ತು.
15 ಮಂದಿ ಸ್ಥಳೀಯ ಯುವಕರು ಹಾಗೂ ಐವರು ಸೈನಿಕರು ಪಾಲ್ಗೊಂಡಿದ್ದ ಸೈಕಲ್ ಯಾತ್ರೆಗೆ ರಿಯಾಸಿ ಕ್ರೀಡಾಂಗಣದಲ್ಲಿ ಬ್ರಿಗೇಡಿಯರ್ ಜೆ.ಎಸ್. ಶೇಖಾವತ್ ಚಾಲನೆ ನೀಡಿದರು.
’ಸ್ಥಳೀಯ ಯುವಕರಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಸೇನೆಯು ಹಿಂದಿನಿಂದಲೂ ಈ ಪ್ರದೇಶದಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಇದರ ಅಂಗವಾಗಿ ಸೈಕಲ್ ಯಾತ್ರೆ ಆಯೋಜಿಸಲಾಗಿದೆ‘ ಎಂದಿದ್ದಾರೆ.
’ಯುವಕರಲ್ಲಿ ಆತ್ಮವಿಶ್ವಾಸ ಹಾಗೂ ರಾಷ್ಟ್ರಪ್ರೇಮ ಬೆಳೆಸಲು ಇದು ಸಹಕಾರಿ‘ ಎಂದೂ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.