ಗುರುವಾರ , ಸೆಪ್ಟೆಂಬರ್ 19, 2019
26 °C

ಡಿಡಿ ನ್ಯೂಸ್‌ನ ನಿರೂಪಕಿ ನೀಲಂ ಶರ್ಮಾ ನಿಧನ

Published:
Updated:

ನವದೆಹಲಿ: ದೂರದರ್ಶನ ಸುದ್ದಿ ವಾಹಿನಿಯಲ್ಲಿ 20 ವರ್ಷಗಳ ಕಾಲ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದ, ‘ನಾರಿ ಶಕ್ತಿ’ ಪ್ರಶಸ್ತಿ ಪುರಸ್ಕೃತ ನೀಲಂ ಶರ್ಮಾ (50) ಅವರು ಶನಿವಾರ ನಿಧನರಾಗಿದ್ದಾರೆ.

ಮಹಿಳಾ ಸಬಲೀಕರಣದ ಪ್ರಬಲ ಪ್ರತಿಪಾದಕರಾಗಿದ್ದ ನೀಲಂ ಶರ್ಮಾ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ನೀಲಂ ಶರ್ಮಾ ಅವರ ನಿಧನಕ್ಕೆ ಡಿಡಿ ನ್ಯೂಸ್‌ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದೆ. ‘ಡಿಡಿ ನ್ಯೂಸ್‌ನ ಸಂಸ್ಥಾಪಕ ನಿರೂಪಕಿಯಾಗಿದ್ದ ಅವರು ವಾಹಿನಿಯ ಮಹತ್ವದ ಸಂದರ್ಭಗಳಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ‘ಬಡೀ ಚರ್ಚಾ’ದಿಂದ ಆರಂಭಿಸಿ ಇತ್ತೀಚಿನ ‘ತೇಜಸ್ವಿನಿ’ ವರೆಗಿನ ಅವರ ಕಾರ್ಯಕ್ರಮಗಳು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರವಾಗಿವೆ. ‘ನಾರಿ ಶಕ್ತಿ’ ಪ್ರಶಸ್ತಿಯೂ ಅದರಲ್ಲೊಂದು,’ ಎಂದು ಡಿಡಿ ನ್ಯೂಸ್‌ ಹೇಳಿದೆ. 

ಶರ್ಮಾ ಅವರು 1995ರಲ್ಲಿ ದೂರದರ್ಶನ ವಾಹಿನಿ ಮೂಲಕ ತಮ್ಮ ವೃತ್ತಿ ಬದುಕು ಆರಂಭಿಸಿದ್ದರು. ಕಳೆದ ವರ್ಷವಷ್ಟೇ ಅವರಿಗೆ ರಾಷ್ಟ್ರಪತಿಗಳು ‘ನಾರಿ ಶಕ್ತಿ’ ಪ್ರಶಸ್ತಿ ನೀಡಿ ಗೌರವಿಸಿದ್ದರು.

Post Comments (+)