ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರಿಗೆ ಬಿರಿಯಾನಿ ಬದಲು ‘ಗೋಲಿ’ ಕೊಡ್ತೀವಿ: ದೆಹಲಿ ರ್‍ಯಾಲಿಯಲ್ಲಿ ಆದಿತ್ಯನಾಥ್

Last Updated 2 ಫೆಬ್ರುವರಿ 2020, 9:01 IST
ಅಕ್ಷರ ಗಾತ್ರ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುವವರ ವಿರುದ್ಧ ಹರಿಹಾಯುವುದರ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿಯೋಗಿ ಆದಿತ್ಯನಾಥ ಶನಿವಾರ ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರ ಭಾಷಣ ಆರಂಭಿಸಿದರು.

‘ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶಾಹೀನ್‌ ಬಾಗ್‌ನಪ್ರತಿಭಟನಾಕಾರರಿಗೆ ಬಿರಿಯಾನಿ ಪೂರೈಸುತ್ತಿದ್ದಾರೆ’ ಎಂದುತಮ್ಮ ಭಾಷಣಗಳಲ್ಲಿ ಯೋಗಿ ಆದಿತ್ಯನಾಥ್ ನೇರ ಆರೋಪ ಮಾಡಿದರು.

ದೆಹಲಿಯ ಶಾಹೀನ್ ಬಾಗ್ ಪೌರತ್ವ ಕಾಯ್ದೆ ವಿರೋಧಿ ಹೋರಾಟಗಳ ಕುದಿಬಿಂದು ಎನಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

‘ದೆಹಲಿಯ ಜನರಿಗೆ ಸರಿಯಾಗಿ ಕುಡಿಯುವ ನೀರು ಕೊಡಲುಅರವಿಂದ್ ಕೇಜ್ರಿವಾಲ್‌ ಅವರಿಗೆ ಆಗಲಿಲ್ಲ. ದೆಹಲಿ ಸರ್ಕಾರ ಪೂರೈಸುತ್ತಿರುವ ನೀರಿನಲ್ಲಿ ವಿಷದ ಅಂಶವಿದೆ ಎಂದುಬಿಐಎಸ್‌ ಸಮೀಕ್ಷೆ ಹೇಳುತ್ತದೆ. ಆದರೆ ಇದೇ ವ್ಯಕ್ತಿ ಶಾಹೀನ್ ಬಾಗ್‌ ಮತ್ತು ನಗರದ ಇತರೆಡೆ ಪ್ರತಿಭಟಿಸುತ್ತಿರುವವರಿಗೆ ಬಿರಿಯಾನಿ ಪೂರೈಸುತ್ತಿದ್ದಾರೆ’ ಎಂದು ಆದಿತ್ಯನಾಥ್ ದೂರಿದರು.

‘ನರೇಂದ್ರ ಮೋದಿ ಪ್ರಧಾನಿಯಾದ ನಂತರ ನಾವು ಎಲ್ಲ ಉಗ್ರಗಾಮಿಗಳನ್ನು ಗುರುತಿಸಿ, ಬಿರಿಯಾನಿ ಕೊಡುವ ಬದಲಿಗೆಗುಂಡು ಹೊಡೆಯುತ್ತಿದ್ದೇವೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು.

‘ಈ ಹಿಂದೆ ಪಾಕಿಸ್ತಾನದಿಂದ ದುಡ್ಡು ಪಡೆದವರು ಕಾಶ್ಮೀರದಲ್ಲಿ ಕಲ್ಲುತೂರಾಟ ನಡೆಸುತ್ತಿದ್ದರು. ಕೇಜ್ರಿವಾಲ್ ಪಕ್ಷ ಮತ್ತು ಕಾಂಗ್ರೆಸ್ ಅಂಥವರನ್ನು ಬೆಂಬಲಿಸುತ್ತಿತ್ತು. ಆದರೆ ಈಗ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಈ ಪ್ರವೃತ್ತಿ ನಿಂತಿದೆ. ಪಾಕಿಸ್ತಾನಿ ಭಯೋತ್ಪಾದಕರನ್ನು ನಮ್ಮ ಯೋಧರುನರಕಕ್ಕೆ ಕಳಿಸುತ್ತಿದ್ದಾರೆ’ ಎಂದು ಹೇಳಿದರು.

‘ದೆಹಲಿಯಲ್ಲಿ ಮೆಟ್ರೊ ಅಭಿವೃದ್ಧಿ, ಸ್ವಚ್ಛ ಕುಡಿಯುವ ನೀರು ಮತ್ತು ವಿದ್ಯುತ್ ಸರಬರಾಜು ಕಡೆಗೆ ಕೇಜ್ರಿವಾಲ್ ಅವರಿಗೆ ಗಮನವಿಲ್ಲ. ಅವರಿಗೆ ಶಾಹೀನ್ ಬಾಗ್ ಮಾತ್ರ ಮುಖ್ಯ. ದೆಹಲಿ ಅಭಿವೃದ್ಧಿಗೆ ವಿನಿಯೋಗಿಸಬೇಕಾದ ಹಣವನ್ನೂ ಕೇಜ್ರಿವಾಲ್ ಪ್ರತಿಭಟನಾಕಾರರಿಗೆ ಬಿರಿಯಾನಿ ಕೊಡಿಸಲು ಬಳಸುತ್ತಾರೆ’ ಎಂದು ವ್ಯಂಗ್ಯವಾಡಿದರು.

ದೆಹಲಿಯ ಕರವಾಲ್ ನಗರ್, ಆದರ್ಶ್ ನಗರ್, ನರೇಲಾ ಮತ್ತು ರೋಹಿಣಿ ಕ್ಷೇತ್ರಗಳಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ ಯೋಗಿ ಆದಿತ್ಯನಾಥ್ ಮಾಡಿದ ಭಾಷಣವು ಇದೇ ಬಿರಿಯಾನಿ, ಗುಂಡು ಹೊಡೆಯುವುದು ಮತ್ತು ಪಾಕಿಸ್ತಾನದ ಸುತ್ತಲೇ ಸುತ್ತುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT