ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ| ಸಮುದಾಯದಲ್ಲಿ ಕೋವಿಡ್‌–19, ಸಭೆ ಕರೆದ ಡಿಡಿಎಂಎ

Last Updated 8 ಜೂನ್ 2020, 14:14 IST
ಅಕ್ಷರ ಗಾತ್ರ

ನವದೆಹಲಿ: ‘ದೆಹಲಿಯಲ್ಲಿ ಕೋವಿಡ್‌–19 ಸಮುದಾಯದ ಹಂತದಲ್ಲಿ ಹರಡುತ್ತಿದೆಯೇ ಎನ್ನುವುದನ್ನು ನಿರ್ಣಯಿಸಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಮಂಗಳವಾರ ಸಭೆ ಕರೆದಿದೆ’ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌‌ ಸಿಸೋಡಿಯಾ ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಡಿಡಿಎಂ ಸಭೆಯಲ್ಲಿ ತಜ್ಞರು ಕೂಡ ಭಾಗವಹಿಸುತ್ತಿದ್ದಾರೆ.ಒಂದು ವೇಳೆ ದೆಹಲಿಯಲ್ಲಿ ವೈರಸ್ ಸಮುದಾಯದ ಮಟ್ಟದಲ್ಲಿ ಹರಡಲಾರಂಭಿಸಿದೆ ಎಂದಾದಲ್ಲಿ, ಪರಿಸ್ಥಿತಿಯನ್ನು ಎದುರಿಸಿಲು ಎಎಪಿ ಸರ್ಕಾರ ತನ್ನ ಕಾರ್ಯತಂತ್ರವನ್ನು ಬದಲಾಯಿಸಬೇಕಾಗುತ್ತದೆ’ ಎಂದರು.

ಡಿಡಿಎಂಎ ಉಪಾಧ್ಯಕ್ಷರಾಗಿರುವಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಭೆಯಲ್ಲಿ ತಮ್ಮ ಪರವಾಗಿ ಭಾಗವಹಿಸಲು ಮನೀಷ್ ಸಿಸೋಡಿಯಾ ಅವರಿಗೆ ಅಧಿಕಾರ ನೀಡಿದ್ದಾರೆ. ಗಂಟಲು ನೋವು ಮತ್ತು ಜ್ವರದ ಕಾರಣ ಕೇಜ್ರಿವಾಲ್ ಸ್ವಯಂ ಕ್ವಾರಂಟೈನ್‌ನಲ್ಲಿದ್ದಾರೆ.

ಭಾನುವಾರ ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,900ಕ್ಕೆ ತಲುಪಿದೆ. ಒಂದೇ ದಿನದಲ್ಲಿ 1,282 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳಲ್ಲಿ17,125 ಪ್ರಕರಣಗಳು ಸಕ್ರಿಯವಾಗಿವೆ. 10,999 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 812 ಮಂದಿ ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT