ಗುರುವಾರ , ಅಕ್ಟೋಬರ್ 6, 2022
24 °C

ದೆಹಲಿ| ಎಲ್ಲ ಅಂಗಡಿ, ಸಲೂನ್ ತೆರೆಯಲು ತೀರ್ಮಾನ: ಅರವಿಂದ್ ಕೇಜ್ರಿವಾಲ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Kejriwal

ನವದೆಹಲಿ: ದೆಹಲಿಯಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಲು ಸರ್ಕಾರ ನಿರ್ಧರಿಸಿದ್ದು ಹೇರ್ ಸಲೂನ್‌ಗಳನ್ನು ತೆರೆಯಬಹುದು ಆದರೆ ಸ್ಪಾ ತೆರೆಯುವಂತಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಕೇಜ್ರಿವಾಲ್, ಇಲ್ಲಿಯವರಗೆ ಅನುಮತಿ ನೀಡಿರುವ ಸಂಗತಿಗಳ ಹೊರತಾಗಿ ಸಲೂನ್ ಮತ್ತು ಕ್ಷೌರದಂಗಡಿ ತೆರೆಯಲು ಅನುಮತಿ ನೀಡಲಾಗುವುದು. ಆದರೆ ಸ್ಪಾ ತೆರೆಯುವುದಿಲ್ಲ ಎಂದಿದ್ದಾರೆ. 

ಆರ್ಥಿಕತೆಯ ದೃಷ್ಟಿಯಿಂದ ಹಂತ ಹಂತವಾಗಿ ಲಾಕ್‍ಡೌನ್ ಸಡಿಲಿಕೆ ಮಾಡಬೇಕೆಂದು ಶನಿವಾರ ಕೇಂದ್ರ ಸರ್ಕಾರ ಹೇಳಿತ್ತು. ಆದಾಗ್ಯೂ, ಕಂಟೈನ್ಮೆಂಟ್ ವಲಯಲ್ಲಿ ಜೂನ್ 30ರವರೆಗೆ ಲಾಕ್‍ಡೌನ್  ಮುಂದುವರಿಯಲಿದೆ.  ಒಂದು ವಾರಗಳ ಕಾಲ ಎಲ್ಲ ಗಡಿ ಭಾಗಗಳನ್ನು ಮುಚ್ಚಲಿದ್ದು, ಅಗತ್ಯ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗುವುದು.

ಆಟೊ, ಇ-ರಿಕ್ಷಾ ಮತ್ತು ಇತರ ವಾಹನಗಳಲ್ಲಿ ಈ ಹಿಂದಿನ ಆದೇಶದಂತೆ ಪ್ರಯಾಣಿಕರ ಸಂಖ್ಯೆ ಇಂತಿಷ್ಟು ಎಂದಿತ್ತು. ಆದರೆ ಈಗ ನಾವು ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಗಿರುವ ನಿರ್ಬಂಧವನ್ನು ತೆಗೆಯಲಾಗಿದೆ.

ಮಾರುಕಟ್ಟೆಯಲ್ಲಿ ಅಂಗಡಿ ತೆರೆಯಲು ಸಮ-ಬೆಸ ನಿಯಮ ಪಾಲಿಸುತ್ತಿದ್ದೆವು. ಆದರೆ ಕೇಂದ್ರ ಸರ್ಕಾರ ಈ ರೀತಿಯ ಯಾವುದೇ ನಿಯಮ ಪಾಲಿಸಲು ಹೇಳದೇ ಇರುವ ಕಾರಣ ಎಲ್ಲ ಅಂಗಡಿಗಳನ್ನು ತೆರೆಯಬಹುದು ಎಂದಿದ್ದಾರೆ ಕೇಜ್ರಿವಾಲ್.
 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು