ಶನಿವಾರ, ಸೆಪ್ಟೆಂಬರ್ 21, 2019
24 °C

ಆರ್‌ಸಿಬಿ ವೈಫಲ್ಯಕ್ಕೆ ಮಲ್ಯ ಬೇಸರ: ಕೊಹ್ಲಿ ಅಭಿಪ್ರಾಯಕ್ಕೆ ವ್ಯತಿರಿಕ್ತ ಟ್ವೀಟ್‌

Published:
Updated:

ಬೆಂಗಳೂರು: ಐಪಿಎಲ್‌ 2019ರ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್‌ ಬೆಂಗಳೂರು ತಂಡ ಕಂಡ ವೈಫಲ್ಯಕ್ಕೆ ವಿಜಯ್‌ ಮಲ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. 

ಕೊನೆ ಐಪಿಎಲ್‌ ಪಂದ್ಯದ ನಂತರ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಪ್ರಕಟಿಸಿದ್ದ ವಿರಾಟ್‌ ಕೊಹ್ಲಿ,  ‘ನೀವು ಇಲ್ಲಾಂದ್ರೆ ನಾವು ಏನು ಅಲ್ಲಾ’ ಎನ್ನುವ ಮೂಲಕ ಅಭಿಮಾನಿಗಳ ಬೆಂಬಲ ನಿರೀಕ್ಷಿಸಿ ವಿಶ್ವಾಸಯುತವಾಗಿ ಮಾತನಾಡಿದ್ದರು. ಕೊಹ್ಲಿ ಅವರ ಆದೇ ಅಭಿಪ್ರಾಯವನ್ನು ಉಲ್ಲೇಖಿಸಿ ಇಂದು ಟ್ವೀಟ್‌ ಮಾಡಿರುವ ವಿಜಯ್‌ ಮಲ್ಯ ‘ಆರ್‌ಸಿಬಿಯದ್ದು ಸದಾ ಉತ್ತಮ ಲೈನ್‌ ಆಪ್‌. ಆದರೆ, ಅದು ಕಾಗದದಲ್ಲಿ ಮಾತ್ರ. ಮರದ ಚಮಚದಿಂದ (ಬಹುಶಃ ಮರದ ಬ್ಯಾಟ್‌) ಧ್ವಂಸಗೊಳಿಸಿಬಿಟ್ಟಿರಿ,’ ಎಂದು ನಕಾರಾತ್ಮಕವಾಗಿ ಮಾತನಾಡಿದ್ದಾರೆ. 

ಮಲ್ಯ ಅವರ ಈ ಟ್ವೀಟ್‌ಗೆ ಟೀಕೆಗಳು ವ್ಯಕ್ತವಾಗಿದೆ. ಅಲ್ಲದೆ, ನೀವು ಮರಳಿ ಭಾರತಕ್ಕೆ ಬರುವುದು ಯಾವಾಗ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. 

Post Comments (+)