ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮಸ್ತೆ ಟ್ರಂಪ್‌’: ರೋಡ್‌ ಷೋಗೆ ಸಿದ್ಧತೆ, ಸಾಂಸ್ಕೃತಿಕ ವಿವಿಧತೆ ಅನಾವರಣ

ಒಂದು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ
Last Updated 16 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಅಹಮದಾಬಾದ್‌: ಬೃಹತ್‌ ಮತ್ತು ಅತ್ಯಂತ ಆಕರ್ಷಕ ರೋಡ್‌ ಷೋ ‘ನಮಸ್ತೆ ಟ್ರಂಪ್‌’ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಸ್ವಾಗತಿಸಲು ಅಹಮದಾಬಾದ್‌ ನಗರ ಸಜ್ಜಾಗುತ್ತಿದೆ.

ಇದೇ 24ರಂದು ಡೊನಾಲ್ಡ್‌ ಟ್ರಂಪ್‌ ನಗರಕ್ಕೆ ಭೇಟಿ ನೀಡಲಿದ್ದು, ದೇಶದಲ್ಲೇ ಇದುವರೆಗಿನ ಬೃಹತ್‌ ಸ್ವಾಗತ ಕಾರ್ಯಕ್ರಮ ಇದಾಗಲಿದ್ದು, ಅಹಮದಾಬಾದ್‌ ಮಹಾನಗರ ಪಾಲಿಕೆ ಸಿದ್ಧತೆ ಕಾರ್ಯಗಳನ್ನು ಭರದಿಂದ ಕೈಗೊಂಡಿದೆ.

ದೇಶದ ವಿವಿಧತೆ ಮತ್ತು ಸಾಂಸ್ಕೃತಿಕ ಚಿತ್ರಣವನ್ನು ರೋಡ್‌ ಷೋನಲ್ಲಿ ಅನಾವರಣಗೊಳಿಸಲು ಉದ್ದೇಶಿಸಲಾಗಿದ್ದು, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

‘ರೋಡ್‌ ಷೋ ನಡೆಯುವ ಮಾರ್ಗದಲ್ಲಿ ಪ್ರತಿಯೊಂದು ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ವೇದಿಕೆಗಳನ್ನು ನಿರ್ಮಿಸಲಾಗುವುದು. ಈ ವೇದಿಕೆಯಲ್ಲಿ ಕಲಾವಿದರು ಸಾಂಪ್ರದಾಯಿಕ ಧಿರಿಸುಗಳಲ್ಲಿ ತಮ್ಮ ರಾಜ್ಯಗಳ ನೃತ್ಯ ಮತ್ತು ಸಂಗೀತದ ಕಲಾಪ್ರಕಾರಗಳನ್ನು ಪ್ರದರ್ಶಿಸಲಿದ್ದಾರೆ. ರೋಡ್‌ ಷೋನಲ್ಲಿ ಕನಿಷ್ಠ ಒಂದು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ಸಾಬರಮತಿ ಆಶ್ರಮದವರೆಗೆ ಹಾಗೂ ಅಲ್ಲಿಂದ ಮೊಟೆರಾ ಕ್ರಿಕೆಟ್‌ ಕ್ರೀಡಾಂಗಣದವರೆಗಿನ ರಸ್ತೆಯನ್ನು| ಅಲಂಕೃತಗೊಳಿಸಲಾಗುತ್ತಿದೆ. ಕೊಳೆಗೇರಿ ಪ್ರದೇಶ ಕಾಣಿಸದಂತೆ ಇಂದಿರಾ ಸೇತುವೆ ಬಳಿ ಗೋಡೆಯನ್ನು ಸಹ ನಿರ್ಮಿಸಲಾಗಿದೆ.

ಸುಮಾರು 200 ಪತ್ರಕರ್ತರು ಸೇರಿದಂತೆ 500 ಮಂದಿ ಟ್ರಂಪ್‌ ಅವರ ಜತೆ ಆಗಮಿಸಲಿದ್ದಾರೆ. ಜತೆಗೆ ದೇಶದ ವಿವಿಧ ಭಾಗಗಳಿಂದ ಒಂದು ಸಾವಿರ ಪತ್ರಕರ್ತರನ್ನು ಸಹ ಆಹ್ವಾನಿಸಲಾಗಿದೆ.

ದೂರದರ್ಶನದ ಮೂಲಕ ರೋಡ್‌ ಷೋ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗುವುದು. ಇದಕ್ಕಾಗಿ 50 ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ರೋಡ್‌ ಷೋ ಬಳಿಕ ಮೊಟೆರಾ ಕ್ರಿಕೆಟ್‌ ಕ್ರೀಡಾಂಗಣವನ್ನು ಪ್ರಧಾನಿ ಮೋದಿ ಮತ್ತು ಟ್ರಂಪ್‌ ಉದ್ಘಾಟಿಸಲಿದ್ದಾರೆ. ಈ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲೂ 1ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಕ್ರಮದ ಬಗ್ಗೆ ಟ್ವೀಟ್‌ ಮಾಡಿರುವ ಪಾಲಿಕೆ ಆಯುಕ್ತರು, ‘ಭಾರತದ ಅತಿ ದೊಡ್ಡ ರೋಡ್‌ ಷೋ ಮತ್ತಷ್ಟು ದೊಡ್ಡದಾಗುತ್ತಿದೆ. 22 ಕಿಲೋ ಮೀಟರ್‌ ರೋಡ್‌ ಷೋನಲ್ಲಿ 1ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ಇದು ನಮಗೆ ದೊರೆತ ಅಪರೂಪದ ಅವಕಾಶ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT