ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಲಘು ಭೂಕಂಪ: ಆತಂಕದಿಂದ ಮನೆಯಿಂದ ಹೊರಬಂದ ಜನರು

Last Updated 10 ಮೇ 2020, 10:19 IST
ಅಕ್ಷರ ಗಾತ್ರ

ನವದೆಹಲಿ: ಭಾನುವಾರ ಮಧ್ಯಾಹ್ನ ದೆಹಲಿಯಲ್ಲಿ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರದ ಪ್ರಕಾರ ಮಧ್ಯಾಹ್ನ 1.45ಕ್ಕೆ ಈ ಭೂಕಂಪಿಸಿದೆ. ಇದುವರೆಗೂ ಯಾವುದೇ ಜೀವ ಹಾನಿಯಾದ ಬಗ್ಗೆ ಮಾಹಿತಿ ಇಲ್ಲ. ಭೂಕಂಪಿಸಿದ ಅನುಭವವಾಗಿರುವುದನ್ನುದೆಹಲಿಯ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿಸ್ಥಳೀಯ ಆಡಳಿತ ತಿಳಿಸಿದೆ.

ಲಘು ಭೂಕಂಪವುರಿಕ್ಟರ್ ಮಾಪಕದಲ್ಲಿ 3.4 ರಷ್ಟಿತ್ತು ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಸೋನಿಯಾ ವಿಹಾರದಹವಾಮಾನ ಇಲಾಖೆಯಲ್ಲಿ ಭೂಕಂಪನ ದೃಶ್ಯಗಳು ದಾಖಲಾಗಿವೆ.ಇದು ದೆಹಲಿಯಲ್ಲಿ ಈ ಸಾಲಿನಲ್ಲಿ ಸಂಭವಿಸಿದ ಮೂರನೇ ಭೂಕಂಪವಾಗಿದೆ. ಈ ಸಂಬಂಧ ಹಲವು ನಾಗರಿಕರು ಹವಾಮಾನ ಇಲಾಖೆಯ ಸಹಾಯವಾಣಿಗೆಕರೆ ಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಭೂಕಂಪ ಭೂಮಿಯ 5 ಕಿಲೋ ಮೀಟರ್ ಆಳದಲ್ಲಿಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದೆಹಲಿ ಮತ್ತು ಸುತ್ತಮುತ್ತ ಅನೇಕ ದೋಷಗಳಿವೆ. ಈ ದೋಷಗಳು ಭೂಕಂಪಗಳಿಗೆ ಕಾರಣವಾಗಬಹುದು. ಆದರೆ ಏನಾಯಿತು ಎಂಬುದನ್ನು ನೋಡಲು ನಮ್ಮ ಕೇಂದ್ರದಲ್ಲಿ ದಾಖಲಾಗಿರುವದಾಖಲೆಗಳು ಹಾಗೂ ಸಂಶೋಧನೆಗಳನ್ನು ಪರಿಶೀಲಿಸಬೇಕಾಗಿದೆ ಎಂದು ಭೂಕಂಪಶಾಸ್ತ್ರಜ್ಞ ಎ.ಪಿ. ಪಾಂಡೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT