ಸೋಮವಾರ, ಜೂನ್ 1, 2020
27 °C

ಹುಟ್ಟುಹಬ್ಬಕ್ಕೆ ಕೇಕ್ ನೀಡಿ ಶುಭಕೋರಿದ ಹರಿಯಾಣ ಪೊಲೀಸ್;ಭಾವುಕರಾದ ಹಿರಿಯ ವ್ಯಕ್ತಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

puri

ಪಂಚಕುಲಾ: ಲಾಕ್‍ಡೌನ್ ಹೊತ್ತಲ್ಲಿ ಪೊಲೀಸರು ಹಿರಿಯ ವ್ಯಕ್ತಿಯೊಬ್ಬರ ಮನೆಯ ಗೇಟಿನ ಮುಂದೆ ಕೇಕ್ ತಂದು ಶುಭಕೋರುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಹರಿಯಾಣದ ಪಂಚಕುಲಾದಲ್ಲಿ ಕರಣ್ ಪುರಿ ಎಂಬ ಹಿರಿಯ ವ್ಯಕ್ತಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಅಲ್ಲಿಗೆ ಸ್ಥಳೀಯ ಪೊಲೀಸರು ಕೇಕ್ ತೆಗೆದುಕೊಂಡು ಹೋಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ .

ಐಪಿಎಸ್ ಅಧಿಕಾರಿ ಪಂಕಜ್ ನೈನ್ ಟ್ವೀಟ್ ಮಾಡಿದ ಈ ವಿಡಿಯೊದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ಹಿರಿಯ ವ್ಯಕ್ತಿಯಲ್ಲಿ ಹೆಸರು ಕೇಳುತ್ತಿದ್ದಾರೆ. ಆಗ ಅಚ್ಚರಿಯಿಂದ ಮನೆಯ ಹೊರಗಡೆ ಬಂದ ಆ ವ್ಯಕ್ತಿ, ನನ್ನ ಹೆಸರು ಕರಣ್ ಪುರಿ, ನಾನು ಒಬ್ಬನೇ ವಾಸಿಸುತ್ತಿದ್ದೇನೆ. ನಾನು ಹಿರಿಯ ನಾಗರಿಕ ಎಂದು ಹೇಳುತ್ತಾರೆ. ಅವರು ಗೇಟ್ ಹತ್ತಿರ ಬರುತ್ತಿದ್ದಂತೆ ಪೊಲೀಸರೆಲ್ಲರೂ ಹ್ಯಾಪಿ ಬರ್ತ್ ಡೇ ಎಂದು ಹಾಡುತ್ತಾರೆ.

ಪಂಚಕುಲಾ ಪೊಲೀಸರ ಈ ಸರ್‌ಪ್ರೈಸ್ ನೋಡಿ ಆ ವ್ಯಕ್ತಿ ಭಾವುಕರಾಗುತ್ತಾರೆ. ಪರ್ವಾಗಿಲ್ಲ ಸರ್, ನಾವೂ ನಿಮ್ಮ ಕುಟುಂಬದವರೇ ಎಂದು ಪೊಲೀಸರೊಬ್ಬರು ಹೇಳುವುದು ವಿಡಿಯೊದಲ್ಲಿ ಕೇಳಿಸುತ್ತದೆ.

ಆಮೇಲೆ ಬರ್ತ್ ಡೇ ಟೋಪಿ ಹಾಕಿ, ಕೇಕ್ ಕತ್ತರಿಸಿ ಎಂದು ಹೇಳಿದಾಗ ಅವರು ಗೇಟಿನ ಬಳಿ ಬಂದು ಕೇಕ್ ಕತ್ತರಿಸುತ್ತಾರೆ.

ಪೊಲೀಸರೊಂದಿಗಿನ ಸಂವಹನ ಎಂದಿಗೂ ಭಾವನಾತ್ಮಕವಾಗಿರುತ್ತದೆ. ಅದು ಭಯ, ಸಿಟ್ಟು, ಆತಂಕ ಅಥವಾ ಕೃತಜ್ಞತೆಯೇ ಆಗಿರಲಿ. ಆದರೆ ಈ ರೀತಿ ಭಾವುಕರಾಗಿದ್ದು ನಾನು ಇಲ್ಲಿಯವರೆಗೂ ನೋಡಿಲ್ಲ ಎಂದು ನೈನ್ ಟ್ವೀಟಿಸಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು