ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪಿಲ್ ವಿವಾದಿತ ಟ್ವೀಟ್ ಅಳಿಸಿಹಾಕುವಂತೆ ಚುನಾವಣಾ ಆಯೋಗದಿಂದ ಟ್ವಿಟರ್‌‌ಗೆ ಮನವಿ

Last Updated 24 ಜನವರಿ 2020, 11:08 IST
ಅಕ್ಷರ ಗಾತ್ರ

ನವದೆಹಲಿ:ದೆಹಲಿ ವಿಧಾನಸಭಾ ಚುನಾವಣೆಯನ್ನುಭಾರತ-ಪಾಕಿಸ್ತಾನ ನಡುವಿನ ಸ್ಪರ್ಧೆ ಎಂದು ಟ್ವಿಟರ್ ಖಾತೆಯಲ್ಲಿಬರೆದುಕೊಂಡಿರುವಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರ ಸರಣಿ ಟ್ವೀಟ್‌‌ಗಳನ್ನು ವೆಬ್‌‌ಸೈಟ್‌‌ನಿಂದ ಡಿಲೀಟ್ ಮಾಡುವಂತೆ ಚುನಾವಣೆ ಆಯೋಗ ಟ್ವಿಟರ್ ಮುಖ್ಯಸ್ಥರಿಗೆ ಮನವಿ ಮಾಡಿದೆ.

ಇದೊಂದು 'ಅತ್ಯಂತ ಆಕ್ಷೇಪಾರ್ಹ' ಟ್ವೀಟ್ ಎಂದು ಹೇಳಿದ್ದು, ಚುನಾವಣಾ ನೀತಿ ಸಂಹಿತೆಯ 1 (3) ಪ್ರಕಾರ ಇಂತಹ ಟ್ವೀಟ್‌ಗಳುನಿಷಿದ್ಧ, ಈ ಟ್ವೀಟ್ ಕೋಮುಭಾವನೆಗಳಿಗೆ ಧಕ್ಕೆ ತರುವಂತಹದ್ದು, ದಯವಿಟ್ಟು ಇದರ ವಿರುದ್ಧ ಕ್ರಮ ಕೈಗೊಳ್ಳಿ ಮತ್ತು ತೆಗೆದುಕೊಂಡ ಕ್ರಮವನ್ನು ಆಯುಕ್ತರಿಗೆ ತಿಳಿಸಿ ಎಂದು ಚುನಾವಣಾ ಆಯೋಗ ತಿಳಿಸಿದೆ.

ಟ್ವೀಟ್ ಸಂಬಂಧ ದೆಹಲಿ ಮುಖ್ಯ ಚುನಾವಣಾಧಿಕಾರಿ ಮುಖ್ಯಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಿ ಟ್ವೀಟ್ ತೆಗೆದುಹಾಕಲು ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳಿ ಎಂದು ತಿಳಿಸಿತ್ತು.ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದು ಮಾಡಲ್ ಟೌನ್ ಕ್ಷೇತ್ರದಿಂದ ಸ್ಪರ್ಧಿಸಿರುವ ಕಪಿಲ್ ಮಿಶ್ರಾ ತಮ್ಮ ಟ್ವಿಟರ್‌ನಲ್ಲಿ ಫೆ.8ರಂದು ನಡೆಯುವ ದೆಹಲಿ ಧಾನಸಭಾ ಚುನಾವಣೆಇಂಡಿಯಾ ಮತ್ತು ಪಾಕಿಸ್ತಾನ ನಡುವಿನಸ್ಪರ್ಧೆ ಆಗಿದೆ ಎಂದು ಹೇಳಿದ್ದರು. ಸರಣಿ ಟ್ವೀಟ್ಮಾಡಿ,ಈಗಾಗಲೇ ಶಹೀನ್ ಭಾಗ್‌‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು ಇದು ಪಾಕಿಸ್ತಾನ ಪ್ರಾಯೋಜಿತ ಪ್ರತಿಭಟನೆ ಎಂದಿದ್ದರು.

ಕಾಂಗ್ರೆಸ್ ಹಾಗೂ ಅಮ್ ಆದ್ಮಿ ಪಕ್ಷಗಳು ದೆಹಲಿಯ ಮಿನಿ ಪಾಕಿಸ್ತಾನಗಳ ಸೃಷ್ಟಿಕರ್ತರಾಗಿದ್ದು, ಈ ಮಿನಿ ಪಾಕಿಸ್ತಾನಗಳಲ್ಲಿ ಶಹೀನ್ ಬಾಗ್ ಕೂಡ ಒಂದು. ಫೆ.8 ರಂದು ಅವರಿಗೆ ಇಂಡಿಯಾದಿಂದ ಉತ್ತರ ಸಿಗುತ್ತದೆ. ಇಂತಹ ವ್ಯಕ್ತಿಗಳು ಮುಖಾಮುಖಿ ಎದುರಾಗಬೇಕು ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT