ಶುಕ್ರವಾರ, ಜನವರಿ 24, 2020
18 °C
ಅರೆಸೇನಾಪಡೆ, ಗಡಿಕಾವಲ ಪಡೆಯಲ್ಲಿ ನೂತನ ವ್ಯವಸ್ಥೆ

ಯೋಧರ ‘ಕಲ್ಯಾಣ’ಕ್ಕೆ ಪೋರ್ಟಲ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅರೆಸೇನಾಪಡೆ, ಗಡಿ ಭದ್ರತಾ ಪಡೆಯಲ್ಲಿ ಕೆಲಸ ಮಾಡುವ ಅವಿವಾಹಿತ, ವಿಧವಾ ಹಾಗೂ ವಿಚ್ಛೇದಿತ ಸಿಬ್ಬಂದಿಗಾಗಿ ಇದೇ ಮೊದಲ ಬಾರಿಗೆ ಇಂಡೋ–ಟಿಬೆಟನ್ ಬಾರ್ಡರ್‌ ಪೊಲೀಸ್‌ ಪಡೆಯು (ಐಟಿಬಿಪಿ) ವೈವಾಹಿಕ ತಾಣ (ಪೋರ್ಟಲ್‌) ಅಭಿವೃದ್ಧಿಪಡಿಸಿದೆ.

ವಿಶೇಷವಾಗಿ ಚೀನಾ ಗಡಿಯಲ್ಲಿ ಕಾವಲು ಕಾಯುತ್ತಿರುವ 25 ಸಾವಿರ ಅವಿವಾಹಿತ ಪುರುಷ ಹಾಗೂ 10 ಸಾವಿರ ಮಹಿಳಾ ಸಿಬ್ಬಂದಿಗಾಗಿಯೇ ಈ ವ್ಯವಸ್ಥೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾಕ್ಕೆ ಹೊಂದಿಕೊಂಡಿರುವ ದೂರದ ಗಡಿ ಪ್ರದೇಶದಲ್ಲಿ ಈ ಯೋಧರನ್ನು ನಿಯೋಜಿಸಲಾಗಿದ್ದು, ಇವರು ತಮಗೆ ಸರಿಹೊಂದುವ ಮಹಿಳೆ ಅಥವಾ ಪುರುಷನನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಮಾಡಿಕೊಡಲಾಗುವುದು ಎಂದು ಇಂಡೋ–ಟಿಬೆಟಿಯನ್ ಗಡಿ ಪೊಲೀಸ್ ಪಡೆಯ (ಐಟಿಬಿಪಿ) ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡಿಸೆಂಬರ್‌ 9ರಂದು ಈ ಪೋರ್ಟಲ್‌ಗೆ ಚಾಲನೆ ನೀಡಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು