ಗುರುವಾರ , ಜನವರಿ 30, 2020
22 °C

ಎನ್‌ಆರ್‌ಸಿ, ಸಿಎಎ ಬಗ್ಗೆ ಅರ್ಥ ಮಾಡಿಕೊಳ್ಳಿ ಆಮೇಲೆ ಮಾತನಾಡಿ: ಜೂಹಿ ಚಾವ್ಲಾ

ಪಿಟಿಐ Updated:

ಅಕ್ಷರ ಗಾತ್ರ : | |

Juhi Chawla

ಮುಂಬೈ: ದೇಶವನ್ನು ನಿರಂತರವಾಗಿ ಟೀಕಿಸುವ ಬದಲು ಜನರು ತಮ್ಮ ನಡವಳಿಕೆಯಲ್ಲಿ ಬದಲಾವಣೆ ತರಬೇಕು ಎಂದು ನಟಿ ಜೂಹಿ ಜಾವ್ಲಾ ಹೇಳಿದ್ದಾರೆ.

ಬುಧವಾರ ಮುಂಬೈಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೂಹಿ, ಪ್ರತಿಕ್ರಿಯಿಸಲೇ ಬೇಕು ಎಂಬ ನೆಪದಿಂದ ಕೆಲವರು ಪ್ರಶ್ನಿಸುತ್ತಾರೆ. ಅಂತವರಿಗೆ ಈ ಪರಿಸ್ಥಿತಿಯನ್ನು ಅರ್ಥ ಮಾಡಲು ಸಮಯ ಕೊಡಬೇಕು. ನಾವು ಕೆಲಸಕ್ಕೆ ಹೋಗುತ್ತೇವೆ. ಆ ಕಾರ್ಯವನ್ನು ಹೇಗೆ ಮಾಡಬೇಕು ಎಂದು ಯೋಚಿಸುತ್ತೇವೆ. ಆಗ ಎಲ್ಲಿಯಾದರೂ, ಏನಾದರೂ ಘಟನೆ ಸಂಭವಿಸಿದರೆ  ಮಾಧ್ಯಮದವರು ಬಂದು ಈ ಬಗ್ಗೆ ನೀವು ಏನು ಹೇಳುತ್ತೀರಿ ಎಂದು ಕೇಳುತ್ತಾರೆ. ಅಲ್ಲಿ ಏನಾಗಿದೆ ಎಂಬುದು ನಮಗೆ ಗೊತ್ತಿರುವುದಿಲ್ಲ, ಅದು ನಮಗೆ ಅರ್ಥವಾಗಿರುವುದೂ ಇಲ್ಲ, ಆದರೂ ಪ್ರತಿಕ್ರಿಯಿಸುತ್ತಾರೆ. 

ಎನ್‌ಆರ್‌ಸಿ ಅಥವಾ ಸಿಎಎ ಆಗಿರಲಿ ಅದನ್ನು ಜನರು ಅರ್ಥ ಮಾಡಿಕೊಳ್ಳಲಿ. ಅದು ಏನು ಅದರ ಬಗ್ಗೆ ಯಾಕೆ ಚರ್ಚೆ ಆಗುತ್ತಿದೆ ಎಂಬುದರ ಬಗ್ಗೆ ತಿಳಿಯಲಿ. ವಿಭಜನೆ ಬಗ್ಗೆ ಜನರು ಮಾತನಾಡುತ್ತಾರೆ, ನಾವು ಯಾಕೆ ಒಂದಾಗುವ ಬಗ್ಗೆ ಮಾತನಾಡಬಾರದು?

ಸರ್ಕಾರ ಏನು ಮಾಡುತ್ತಿದೆ? ಯಾಕೆ ಹೀಗೆ ಮಾಡುತ್ತಿದೆ ಎಂದು ಜನರು ಕೇಳುತ್ತಿದ್ದಾರೆ. ಆದರೆ  ನೀವು ಇನ್ನೊಬ್ಬರತ್ತ ಬೆರಳು ತೋರಿಸಿದರೆ ಮೂರು ಬೆರಳು ನಿಮ್ಮ ಕಡೆ ತೋರಿಸುತ್ತದೆ. ನಾವು ಏನು ಮಾಡುತ್ತಿದ್ದೇವೆ? ಸಮಾಧಾನದಿಂದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ ಜೂಹಿ ಚಾವ್ಲಾ.
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು