ಬುಧವಾರ, ಜನವರಿ 22, 2020
16 °C

ನನ್ನದೇನೂ ತಪ್ಪಿಲ್ಲ, ನಾನೇನೂ ಮಾಡ್ಲಿಲ್ಲ: ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀರತ್ : ನಾನು ಯಾರಿಗೂ ಏನೂ ಮಾಡಿಲ್ಲ. ನನ್ನದೇನೂ ತಪ್ಪಿಲ್ಲ, ಇದೆಲ್ಲಾ ಸುಳ್ಳು ಸುದ್ದಿ ಎಂದು ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಹೇಳಿದ್ದಾರೆ.

ಕಳೆದ ರಾತ್ರಿ ಮೀರತ್ ನ ಮನೆಯಲ್ಲಿದ್ದ ಪ್ರವೀಣ್ ಕುಮಾರ್ ನೆರೆಮನೆಯ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅವರ ಏಳು ವರ್ಷದ ಮಗನನ್ನು ನೂಕಿದ್ದಾರೆ ಎಂದು ಆರೋಪಿಸಿ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಈ ಸಂಬಂಧ ಪೊಲೀಸರು ಪ್ರವೀಣ್ ಕುಮಾರ್ ಅವರನ್ನು ವಿಚಾರಣೆ ನಡೆಸಿದಾಗ ನಾನೇನೂ ಮಾಡ್ಲಿಲ್ಲ, ನನ್ನದೇನೂ ತಪ್ಪಿಲ್ಲ. ನಾನು ಯಾವುದೇ ಮಗುವನ್ನೂ ನೂಕಿಲ್ಲ. ಬಾಲಕನ ತಂದೆ ನನ್ನ ಸರವನ್ನು ಹಿಡಿದು ಎಳೆಯಲು ಯತ್ನಿಸಿದರು. ನನ್ನ ಮೂಗಿಗೆ ಗುದ್ದಿದರು. ಇದೆಲ್ಲಾ ಸುಳ್ಳು ಎಂದು ಹೇಳಿಕೆ ನೀಡಿದ್ದಾರೆ.

ಈ ಸಂಬಂಧ ಇಬ್ಬರಿಂದಲೂ ದೂರುಗಳನ್ನು ಪಡೆದಿದ್ದೇವೆ. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಸ್ ಪಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು