ತೇಜಸ್‌ ವಿಮಾನದಿಂದ ಕಳಚಿ ಬಿದ್ದ ಇಂಧನ ಟ್ಯಾಂಕ್‌

ಮಂಗಳವಾರ, ಜೂಲೈ 16, 2019
28 °C

ತೇಜಸ್‌ ವಿಮಾನದಿಂದ ಕಳಚಿ ಬಿದ್ದ ಇಂಧನ ಟ್ಯಾಂಕ್‌

Published:
Updated:
Prajavani

ಕೊಯಮತ್ತೂರು: ತೇಜಸ್‌ ಯುದ್ಧ ವಿಮಾನದ ಇಂಧನ ಟ್ಯಾಂಕ್‌ ನಗರದ ಹೊರವಲಯದ ಕೃಷಿ ಭೂಮಿಯಲ್ಲಿ ಮಂಗಳವಾರ ಕಳಚಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ರಕ್ಷಣಾ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ. 

ಆಕಾಶದಿಂದ ಇದ್ದಕ್ಕಿದ್ದಂತೆ 1,200 ಲೀಟರ್‌ ಪೆಟ್ರೋಲ್‌ ಟ್ಯಾಂಕ್‌ ಬೀಳುತ್ತಿರುವುದನ್ನು ಕಂಡು ಇರುಗೂರು ಗ್ರಾಮದ ಕೃಷಿ ಕಾರ್ಮಿಕರು ಆತಂಕಗೊಂಡಿದ್ದರು. ಜಮೀನಿನಲ್ಲಿ ಮೂರು ಅಡಿ ಆಳದ ಕುಳಿ ಉಂಟಾಗಿದ್ದಲ್ಲದೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.  

ಸಮೀಪದ ಸೂಲೂರು ವಾಯುನೆಲೆಯಲ್ಲಿ ಯುದ್ಧ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದೆ. 

ವಾಯುಪಡೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಐಎಎಫ್‌ ಅಧಿಕಾರಿಗಳು ತಿಳಿಸಿದರು. 

ಬರಹ ಇಷ್ಟವಾಯಿತೆ?

 • 2

  Happy
 • 4

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !