ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ವನ್ ಕಣಿವೆ ಸಂಘರ್ಷ: ಚೀನಾ ಸೇನಾಪಡೆಯ ಕಮಾಂಡಿಂಗ್‌ ಅಧಿಕಾರಿ ಸಾವು

Last Updated 17 ಜೂನ್ 2020, 9:58 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಹಾಗೂಚೀನಾ ಸೇನಾಪಡೆಗಳು ಗಾಲ್ವನ್ ಕಣಿವೆಯಲ್ಲಿ ಜೂನ್ 15, 16ರ ರಾತ್ರಿ ನಡೆಸಿದ ಸಂಘರ್ಷದ ವೇಳೆ ಚೀನಾ ಸೇನಾಪಡೆಯಕಮಾಂಡಿಂಗ್‌ ಅಧಿಕಾರಿ ಮೃತಪಟ್ಟಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿಮಾಡಿದೆ.

ಸಂಘರ್ಷದ ಸ್ಥಳದಲ್ಲಿ ಚೀನಾ ಸೇನೆಯ ಹೆಲಿಕಾಪ್ಟರ್‌ ಹಾರಾಟ ನಡೆಸಿದ್ದು, ಹೆಚ್ಚಿನ ಸಾವು–ನೋವು ಸಂಭವಿಸಿರುವುದರ ಸುಳಿವು ನೀಡಿದೆ.

‘ಸೇನಾಪಡೆಗಳು ಮುಖಾಮುಖಿಯಾದ ಸ್ಥಳದಿಂದ ಹೆಚ್ಚಿನ ಸೈನಿಕರನ್ನು ಸ್ಥಳಾಂತರಿಸಲಾಗಿದೆ. ಗಾಲ್ವನ್ ನದಿಯುದ್ದಕ್ಕೂ ಆ್ಯಂಬುಲೆನ್ಸ್‌ಗಳು ಮತ್ತು ಚೀನಾದ ಹೆಲಿಕಾಪ್ಟರ್‌ಗಳ ಚಟುವಟಿಕೆ ಹೆಚ್ಚಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಸಂಘರ್ಷದಲ್ಲಿ ಭಾಗಿಯಾಗಿದ್ದ ಸೈನಿಕರು, ಚೀನಾ ಕಡೆಯಲ್ಲಿ ಹೆಚ್ಚಿನ ಸಾವು–ನೋವು ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಸಂಖ್ಯೆಯನ್ನು ಖಚಿತವಾಗಲಿ ಹೇಳಲು ಸಾಧ್ಯವಿಲ್ಲವಾದರೂ, ಸಾವಿನ ಸಂಖ್ಯೆ 40ಕ್ಕಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ’ ಎಂಬ ಮಾಹಿತಿ ಲಭ್ಯವಾಗಿದೆ.ಇದೇ ವೇಳೆ ದೇಶದ20 ಯೋಧರು ಹುತಾತ್ಮರಾಗಿದ್ದಾರೆ.

ವಿದೇಶಾಂಗ ಇಲಾಖೆಯ ವಕ್ತಾರ ಅನುರಾಗ್‌ ಶ್ರೀವಾಸ್ತವ, ಜೂನ್‌ 15ರ ರಾತ್ರಿ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಚೀನಾ ಪಡೆಗಳ ಪ್ರಚೋದನೆ ಬಳಿಕ ಸಂಘರ್ಷ ಆರಂಭವಾಯಿತು. ಉನ್ನತ ಮಟ್ಟದಲ್ಲಿ ಕೈಗೊಂಡಿದ್ದ ಒಪ್ಪಂದವನ್ನು ಚೀನಾ ಪಾಲಿಸಿದ್ದರೆ, ಹಿಂಸಾತ್ಮಕ ಮುಖಾಮುಖಿಯನ್ನು ತಡೆಯಬಹುದಿತ್ತು.ಸಂಘರ್ಷದ ವೇಳೆ ಎರಡೂ ಕಡೆ ಸಾವು–ನೋವು ಸಂಭವಿಸಿದೆ. ಇದೀಗ ಗಾಲ್ವನ್ ಕಣಿವಯಲ್ಲಿನ ವಾಸ್ತವ ನಿಯಂತ್ರಣ ರೇಖೆಯಿಂದ (ಎಲ್‌ಎಸಿ) ಚೀನಾ ಸೇನೆ ನಿರ್ಗಮಿಸಿದೆ ಎಂದು ಮಾಹಿತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT