ಸೋಮವಾರ, ಫೆಬ್ರವರಿ 24, 2020
19 °C

ಮಾಜಿ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್‌(88) ಮಂಗಳವಾರ ನಿಧನರಾದರು. 

ಇದನ್ನೂ ಓದಿ: ನ್ಯೂಯಾರ್ಕ್‌ನಿಂದ ಪುತ್ರ ಬಂದ ಬಳಿಕ ಜಾರ್ಜ್‌ ಫರ್ನಾಂಡಿಸ್‌ ಅಂತ್ಯಕ್ರಿಯೆ

ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಫರ್ನಾಂಡಿಸ್‌ ರಕ್ಷಣಾ ಸಚಿವರಾಗಿದ್ದರು. ಮಂಗಳೂರಿನಲ್ಲಿ 1930ರಲ್ಲಿ ರೋಮನ್‌ ಕ್ಯಾಥೋ­ಲಿಕ್‌ ಕುಟುಂಬದಲ್ಲಿ ಜಾರ್ಜ್ ಫರ್ನಾಂಡಿಸ್ ಜನಿಸಿದರು.

ಇದನ್ನೂ ಓದಿ: ‘ಜೈಂಟ್ ಕಿಲ್ಲರ್‌’ ಎಂದೇ ಪ್ರಸಿದ್ಧರಾಗಿದ್ದ ಜಾರ್ಜ್‌

ಪಾದ್ರಿಯಾಗಲು ಅಗತ್ಯವಿದ್ದ ತರಬೇತಿ ಹಾಗೂ ಕಲಿಕೆಗಾಗಿ ಅವರ 16ನೇ ವಯಸ್ಸಿನಲ್ಲಿ ಕಳುಹಿಸಲಾಗಿತ್ತು. ಆದರೆ, ಸಮಾಜಮುಖಿಯಾದ ಬೇರೆಯದೇ ಚಿಂತನೆಗಳನ್ನು ಹೊಂದಿದ್ದ ಜಾರ್ಜ್‌ 1949ರಲ್ಲಿ ಬಾಂಬೆಗೆ ತೆರಳಿ, ಕಾರ್ಮಿಕ ಸಂಘನೆಯ ಹೋರಾಟಗಳಲ್ಲಿ ಭಾಗಿಯಾದರು. 

ಬೆಂಕಿಯ ಚೆಂಡಿನಂತೆ ಹೋರಾಟಗಳಲ್ಲಿ ಮುನ್ನಡೆಸುತ್ತಿದ್ದ ಜಾರ್ಜ್‌ ಹಲವು ಪ್ರಮುಖ ಪ್ರತಿಭಟನೆಗಳು ಹಾಗೂ ಬಂದ್‌ಗಳ ನೇತೃತ್ವವಹಿಸಿದ್ದರು. 

ಇದನ್ನೂ ಓದಿ: ಎಲ್ಲಿದ್ದೀರಿ ಜಾರ್ಜ್? ಹೇಗಿದ್ದೀರಿ ಜಾರ್ಜ್?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು