ಗುರುವಾರ , ಜೂನ್ 24, 2021
27 °C

ದೆಹಲಿ ಮೆಟ್ರೊ ನಿಲ್ದಾಣದಲ್ಲಿ ಗೋಲಿ ಮಾರೊ ಘೋಷಣೆ: 6 ಮಂದಿ ಪೊಲೀಸರ ವಶಕ್ಕೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಇಲ್ಲಿನ ರಾಜೀವ್‌ ಚೌಕ್‌ ಮೆಟ್ರೊ ನಿಲ್ದಾಣದಲ್ಲಿ ಗೋಲಿ ಮಾರೊ ಘೋಷಣೆ ಕೂಗುತ್ತಿದ್ದ 6 ಜನರನ್ನು ದೆಹಲಿ ಮೆಟ್ರೊ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ದೆಹಲಿಯ ಪ್ರಮುಖ ಮೆಟ್ರೊ ನಿಲ್ದಾಣಗಳಲ್ಲಿ ಒಂದಾದ ರಾಜೀವ್‌ ಚೌಕ್‌ ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ‘ದೇಶ್‌ ಕಿ ಗದ್ದಾರೊಂಕೊ, ಗೋಲಿ ಮಾರೊ ...’ (ದೇಶಕ್ಕೆ ಮೋಸ ಮಾಡಿದವರಿಗೆ ಗುಂಡು ಹೊಡೆಯಿರಿ) ಎಂಬ  ಘೋಷಣೆ ಕೂಗಲು ಯುವಕರ ಗುಂಪೊಂದು ಆರಂಭಿಸಿದೆ. ಇದನ್ನು ಗಮನಿಸಿದ ದೆಹಲಿ ಮೆಟ್ರೊ ಭದ್ರತಾ ಸಿಬ್ಬಂದಿ 6 ಜನರನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದೆ. 

ಘೋಷಣೆ ಕೂಗುತ್ತಿದ್ದ 6 ಜನರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಿ ಆಗಿದೆ.

ಈ ಬಗ್ಗೆ ಸ್ಪಷ್ಟಣೆ ನೀಡಿರುವ ದೆಹಲಿ ಮೆಟ್ರೊ ರೈಲು ಕಾರ್ಪೊರೇಶನ್‌, ‘ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ವಿಡಿಯೊ ರಾಜೀವ್‌ ಚೌಕ್‌ ಮೆಟ್ರೊ ನಿಲ್ದಾಣದಲ್ಲಿ ನಡೆದ ಘಟನೆಗೆ ಸಂಬಂಧಿಸಿದೆ. ಶನಿವಾರ ಮಧ್ಯಾಹ್ನ 12:52ರ ಸಮಯದಲ್ಲಿ ಈ ಘಟನೆ ನಡೆದದ್ದು, ಘೋಷಣೆ ಕೂಗುತ್ತಿದ್ದ 6 ಜನರನ್ನು ಪೊಲೀಸರ ವಶಕ್ಕೆ ಕೊಡಲಾಗಿದೆ’ ಎಂದು ತಿಳಿಸಿದೆ. 

ವಶಕ್ಕೆ ಪಡೆದಿರುವ 6 ಜನರ ವಿಚಾರಣೆಯನ್ನು ಪೊಲೀಸರು ಆರಂಭಿಸಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು