ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಶಾಂತ; 50,000 ಉದ್ಯೋಗವಕಾಶ ಘೋಷಿಸಿದ ಗವರ್ನರ್ ಸತ್ಯಪಾಲ್ ಮಲಿಕ್

Last Updated 28 ಆಗಸ್ಟ್ 2019, 13:31 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಜನರ ಹಿತಾಸಕ್ತಿಯನ್ನುಕಾಪಾಡುವುದಕ್ಕಾಗಿ ಅಲ್ಲಿ ನಿರ್ಬಂಧ ಹೇರಿರುವುದುಎಂದು ಗವರ್ನರ್ ಸತ್ಯ ಪಾಲ್ ಮಲಿಕ್ ಹೇಳಿದ್ದಾರೆ.

ಫೋನ್ ಮತ್ತು ಇಂಟರ್ನೆಟ್‌ನ್ನು ನಾವು ಬಳಸುವುದಕ್ಕಿಂತ ಹೆಚ್ಚಾಗಿ ಉಗ್ರರು ಮತ್ತು ಪಾಕಿಸ್ತಾನಿಗಳು ಬಳಸುತ್ತಾರೆ. ನಮ್ಮ ವಿರುದ್ಧ ಅವರು ಬಳಸಿದ ಅಸ್ತ್ರ ಅದು. ಹಾಗಾಗಿ ನಾವು ಅದನ್ನು ನಿಲ್ಲಿಸಿದೆವು. ಕ್ರಮೇಣ ಈ ನಿರ್ಬಂಧಗಳನ್ನು ತೆರವು ಮಾಡಲಾಗುವುದು ಎಂದಿದ್ದಾರೆ ಮಲಿಕ್

ಬುಧವಾರ ಸುದ್ದಿಗೋಷ್ಠಿ ನಡೆಸಿದ ಮಲಿಕ್, ಮುಂದಿನ ಎರಡು ಮೂರು ತಿಂಗಳಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶಗಳು ಇಲ್ಲಿ ಸೃಷ್ಟಿಯಾಗಿದ್ದು, ಜಮ್ಮು ಮತ್ತು ಕಾಶ್ಮೀರ ಆಡಳಿತ ವ್ಯವಸ್ಥೆಯಲ್ಲಿ 50,000 ಉದ್ಯೋಗಘೋಷಣೆಯನ್ನು ನಾವು ಇಂದು ಮಾಡಿದ್ದೇವೆ ಎಂದಿದ್ದಾರೆ.

ಮಲಿಕ್ ಸುದ್ದಿಗೋಷ್ಠಿಯ ಮುಖ್ಯಾಂಶಗಳು

ಕಾಶ್ಮೀರದ ಕುಪ್ವಾರ ಮತ್ತು ಹಂದ್ವಾರ ಜಿಲ್ಲೆಗಳಲ್ಲಿ ಮೊಬೈಲ್ ಸಂಪರ್ಕ ವ್ಯವಸ್ಥೆಯನ್ನು ನಾವು ಆರಂಭಿಸಲಿದ್ದೇವೆ. ಇತರ ಜಿಲ್ಲೆಗಳಲ್ಲಿಯೂ ಶೀಘ್ರವೇ ಆರಂಭಿಸಲಾಗುವುದು.

ಕಾಶ್ಮೀರದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಪ್ರಾಣವೂ ಅಮೂಲ್ಯವಾದುದುದು. ಯಾರೊಬ್ಬರಿಗೂ ಪ್ರಾಣ ಹಾನಿ ಸಂಭವಿಸಬೇಕೆಂದು ನಾವು ಬಯಸುವುದಿಲ್ಲ. ಇಲ್ಲಿ ಯಾವುದೇ ನಾಗರಿಕರು ಪ್ರಾಣ ಕಳೆದುಕೊಂಡಿಲ್ಲ, ಕೆಲವೊಬ್ಬರಿಗೆ ಗಾಯವಾಗಿದ್ದು, ಸೊಂಟದಿಂದ ಕೆಳಭಾಗಕ್ಕಷ್ಟೇ ಗಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT