ಶನಿವಾರ, ಆಗಸ್ಟ್ 8, 2020
22 °C

ಕಲಾಪ: ಜೋಶಿ–ಸೋನಿಯಾ ಭೇಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಂಸತ್‌ ಕಲಾಪದ ಸುಗಮ ಕಾರ್ಯನಿರ್ವಹಣೆಗೆ ಪೂರಕವಾಗಿ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ  ಶುಕ್ರವಾರ ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿಯಾಗಿ ಸಹಕಾರ ಕೋರಿದರು.

17ನೇ ಲೋಕಸಭೆ ಮೊದಲ ಅಧಿವೇಶನ ಜೂನ್ 17ರಂದು ಆರಂಭವಾಗಲಿದೆ. ಸಂಸತ್ ಅಧಿವೇಶನ ಜುಲೈ 26ರವರೆಗೂ ನಡೆಯಲಿದ್ದು, ಬಜೆಟ್ ಅನ್ನು ಜುಲೈ 5ರಂದು ಮಂಡಿಸಲಾಗುತ್ತದೆ. 

‘ಈ ಭೇಟಿ ಔಪಚಾರಿಕ. ಸಂಸತ್ತಿನ ಸುಗಮ ಕಾರ್ಯ ನಿರ್ವಹಣೆಗೆ ನಾವು ಸಹಕಾರ ಕೋರಿದೆವು. ಆಡಳಿತ ಪಕ್ಷದಿಂದಲೂ ನಮಗೆ ಸಹಕಾರ ಬೇಕು ಎಂದು ಸೋನಿಯಾ ಕೋರಿದರು’ ಎಂದು ಜೋಶಿ ನಂತರ ತಿಳಿಸಿದರು.

ವಿಪಕ್ಷಗಳಿಗೆ ಸರ್ಕಾರ ಎಲ್ಲ ಸಹಕಾರವನ್ನು ನೀಡುವುದಾಗಿ ನಾವು ಭರವಸೆ ನೀಡಿದೆವು ಎಂದು ತಿಳಿಸಿದರು. ಕೇಂದ್ರ ಸಚಿವರಾದ ನರೇಂದ್ರ ಸಿಂಗ್‌ ತೊಮರ್‌ ಮತ್ತು ಅರ್ಜುನ್‌ ರಾಮ್‌ ಮೇಘವಾಲ್‌ ಅವರು ಇದ್ದರು.

ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸರ್ಕಾರದ ಉದ್ದೇಶದ ಭಾಗವಾಗಿ ಜೋಶಿ ಮತ್ತು ಸೋನಿಯಾ ಅವರ ಭೇಟಿ ನಡೆಯಿತು. ಸುಮಾರು 15 ನಿಮಿಷಗಳ ಕಾಲ ಅವರು ಮಾತುಕತೆ ನಡೆಸಿದ್ದಾರೆ.

ಜೋಶಿ ಈ ಹಿಂದೆ ರಾಜ್ಯಸಭೆಯಲ್ಲಿನ ವಿರೋಧಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಮತ್ತು ಲೋಕಸಭೆಯಲ್ಲಿ ಡಿಎಂಕೆ ನಾಯಕ ಟಿ.ಆರ್.ಬಾಲು ಅವರನ್ನೂ ಭೇಟಿ ಆಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು