ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್ ಧರಿಸದ ವರನಿಗೆ ₹2,100 ದಂಡ ವಿಧಿಸಿದ ಇಂದೋರ್ ಮಹಾನಗರ ಪಾಲಿಕೆ ಅಧಿಕಾರಿಗಳು

Last Updated 16 ಜೂನ್ 2020, 1:54 IST
ಅಕ್ಷರ ಗಾತ್ರ

ಇಂದೋರ್: ಕೋವಿಡ್-19ನಿಂದಾಗಿ ತೀವ್ರ ಹೊಡೆತಕ್ಕೆ ಸಿಲುಕಿರುವ ಮಧ್ಯಪ್ರದೇಶದ ಇಂದೋರ್‌ನಲ್ಲಿ ವಾಹನವೊಂದರಲ್ಲಿ ಮಾಸ್ಕ್ ಧರಿಸಿದೆ ಇತರೆ 12 ಜನರೊಂದಿಗೆ ಕುಳಿತುಕೊಳ್ಳುವುದನ್ನು ನೋಡಿದ ಅಧಿಕಾರಿಗಳು ವರನಿಗೆ ₹ 2,100 ದಂಡ ವಿಧಿಸಿದ್ದಾರೆ.

ಅಂತರವನ್ನು ಕಾಯ್ದುಕೊಳ್ಳುವುದು ಸೇರಿದಂತೆ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರೀಕ್ಷಿಸಿಲು ಅಧಿಕಾರಿಗಳು ಗಸ್ತು ತಿರುಗುವಾಗ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದಿದ್ದ ಧರ್ಮೇಂದ್ರ ನಿರಲೆ ಎಂಬುವರಿಗೆ ದಂಡ ವಿಧಿಸಲಾಗಿದೆ ಎಂದು ಇಂದೋರ್ ಮಹಾನಗರ ಪಾಲಿಕೆಯ ಅಧಿಕಾರಿ ವಿವೇಕ್ ಗಂಗ್ರೇಡ್ ತಿಳಿಸಿದ್ದಾರೆ.

'ಆಡಳಿತವು 12 ಜನರಿಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದರೆ, ಈ ಸಂದರ್ಭದಲ್ಲಿ ಎಲ್ಲಾ 12 ಜನರು ಒಂದೇ ವಾಹನದೊಳಗೆ ಮಾಸ್ಕ್ ಧರಿಸದೆಯೇ ಜತೆಯಾಗಿ ಕುಳಿತಿದ್ದರು. ಹೀಗಾಗಿ ನಾವು ನಿರೇಲೆ ಅವರಿಂದ ಸ್ಥಳದಲ್ಲೇ ₹ 2,100 ದಂಡವನ್ನು ವಸೂಲಿ ಮಾಡಿದ್ದೇವೆ' ಎಂದು ಅವರು ಹೇಳಿದರು.

ಅಂತರವನ್ನು ಕಾಯ್ದುಕೊಳ್ಳದಿರುವುದಕ್ಕೆ 1,100 ಮತ್ತು ಮಾಸ್ಕ್ ಧರಿಸದಿರುವುದಕ್ಕೆ ತಲಾ ₹ 1,000 ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ

ಇಂದೋರ್‌ನಲ್ಲಿ ಇದುವರೆಗೂ 4,069 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, 174 ಜನರು ಕೊರೊನಾ ವೈರಸ್ ಸೋಂಕಿನಿಂದಾಗಿ ಬಲಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT