ಮಂಗಳವಾರ, ಸೆಪ್ಟೆಂಬರ್ 21, 2021
22 °C

ಮ್ಯಾಡ್ರಿಡ್‌ ಓಪನ್‌ ಸೆಮಿಗೆ ಸಿಮೋನಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮ್ಯಾಡ್ರಿಡ್‌: ಆ್ಯಶ್ಲೆ ಬಾರ್ಟಿ ಸವಾಲು ಮೀರಿದ ಸಿಮೋನಾ ಹಲೆಪ್‌ ಅವರು ಮ್ಯಾಡ್ರಿಡ್‌ ಓಪನ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರು. ಗುರುವಾರ ನಡೆದ ಪಂದ್ಯದಲ್ಲಿ 7–5, 7–5 ಸೆಟ್‌ಗಳಿಂದ ರೊಮೇನಿಯಾದ ಆಟಗಾರ್ತಿ ಜಯದ ನಗೆ ಬೀರಿದರು.

ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಪಡೆದಿರುವ ಹಲೆಪ್‌ ಇಲ್ಲಿ ಕಣಕ್ಕೆ ಇಳಿಯುವಾಗ ಗಾಯದಿಂದ ಬಳಲುತ್ತಿದ್ದರು. ಆದರೂ ಮೊದಲ ಗೇಮ್‌ ಸುಲಭವಾಗಿ ಗೆದ್ದರು. ಒಂಬತ್ತನೇ ಶ್ರೇಯಾಂಕದ ಬಾರ್ಟಿಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಹಲೆಪ್‌ ವಿರಾಮ ಬಯಸಿದರು. ನಂತರ ಪಂದ್ಯದಲ್ಲಿ ಪಾರಮ್ಯ ಮೆರೆದ ಗೆದ್ದು ಸಂಭ್ರಮಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು