‘ಹನುಮಾನ್‌ ದೇವಸ್ಥಾನಗಳನ್ನು ದಲಿತರು ವಶಪಡಿಸಿಕೊಳ್ಳಬೇಕು’

7
ಯೋಗಿ ಅದಿತ್ಯನಾಥ ಹೇಳಿಕೆಗೆ ಭೀಮ್‌ ಆರ್ಮಿ ಮುಖ್ಯಸ್ಥ ತಿರುಗೇಟು

‘ಹನುಮಾನ್‌ ದೇವಸ್ಥಾನಗಳನ್ನು ದಲಿತರು ವಶಪಡಿಸಿಕೊಳ್ಳಬೇಕು’

Published:
Updated:

ಮುಜಫ್ಫರ್‌ನಗರ: ದೇಶದ ಎಲ್ಲ ಹನುಮಾನ್‌ ದೇವಸ್ಥಾನಗಳನ್ನು ದಲಿತರು ವಶಕ್ಕೆ ತೆಗೆದುಕೊಳ್ಳಬೇಕು ಹಾಗೂ ಅಲ್ಲಿ ದಲಿತ ಅರ್ಚಕರನ್ನು ನೇಮಕ ಮಾಡಬೇಕು ಎಂದು ಭೀಮ್‌ ಆರ್ಮಿ ಸಂಘಟನೆ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ಭಾನುವಾರ ಹೇಳಿದ್ದಾರೆ.

ಹನುಮಾನ್‌ ದಲಿತ ಸಮುದಾಯಕ್ಕೆ ಸೇರಿದವರು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ರಾಜಸ್ಥಾನದ ಅಲ್ವರ್‌ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ನೀಡಿದ್ದ ಹೇಳಿಕೆಗೆ ಚಂದ್ರಶೇಖರ್‌ ಈ ಪ್ರತಿಕ್ರಿಯೆ ನೀಡಿದ್ದಾರೆ.

ಹನುಮಾನ್‌ ದಲಿತ ಎಂದು ನೀಡಿರುವ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ರಾಜಸ್ಥಾನದ ಬಲಪಂಥೀಯ ಸಂಘಟನೆಯೊಂದು ಯೋಗಿ ಅವರಿಗೆ ನೋಟಿಸ್‌ ಕಳುಹಿಸಿದೆ.

ಕಳೆದ ವಾರವಷ್ಟೇ ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗದ ಮುಖ್ಯಸ್ಥ ನಂದಕುಮಾರ್‌ ಅವರು ಹನುಮಾನ್‌ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂದು ಪ್ರತಿಪಾದಿಸಿದ್ದರು.

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !