ಶನಿವಾರ, ಆಗಸ್ಟ್ 24, 2019
23 °C

ಸಂಜೀವ್‌ ಭಟ್‌ ಭೇಟಿಗೆ ತೆರಳುತ್ತಿದ್ದ ಹಾರ್ದಿಕ್‌ ಬಂಧನ

Published:
Updated:
Prajavani

ಪಾಲನಪುರ (ಪಿಟಿಐ): ವಜಾಗೊಂಡ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಅವರನ್ನು ಭೇಟಿಯಾಗಲು ಜೈಲಿಗೆ ತೆರಳುತ್ತಿದ್ದ ವೇಳೆ ಕಾಂಗ್ರೆಸ್‌ ಮುಖಂಡ ಹಾರ್ದಿಕ್‌ ಪಟೇಲ್‌ ಮತ್ತು ಇಬ್ಬರು ಶಾಸಕರನ್ನು ಬುಧವಾರ ವಶಕ್ಕೆ ಪಡೆಯಲಾಗಿದೆ. 

ಪೊಲೀಸ್‌ ವಶದಲ್ಲಿದ್ದ ವ್ಯಕ್ತಿಯ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜೀವ್‌ ಭಟ್‌ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಅವರು ಪಾಲನಪುರ ಜೈಲಿನಲ್ಲಿದ್ದಾರೆ.

‘ಜೈಲಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಹಾರ್ದಿಕ್‌ ಪಟೇಲ್‌ ಸೇರಿದಂತೆ 30 ಮಂದಿಯನ್ನು ವಶಕ್ಕೆ ಪಡೆದಿದ್ದೇವೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಬದ್ಗೂಜರ್‌ ತಿಳಿಸಿದ್ದಾರೆ. 

ಪಾಲನಪುರ ಶಾಸಕ ಮಹೇಶ್‌ ಪಟೇಲ್‌ ಮತ್ತು ಪಟಾಣ್‌ ಶಾಸಕ ಕಿರಿತ್ ಪಟೇಲ್‌ ಅವರನ್ನು ವಶಕ್ಕೆ ಪಡೆಯಲಾಗಿದೆ.

Post Comments (+)