ಗುಜರಾತ್‌: ಕಾಂಗ್ರೆಸ್‌ ಸೇರ್ಪಡೆಗೆ ಹಾರ್ದಿಕ್‌ ಪಟೇಲ್‌ ಸಿದ್ಧತೆ

ಶನಿವಾರ, ಮಾರ್ಚ್ 23, 2019
34 °C

ಗುಜರಾತ್‌: ಕಾಂಗ್ರೆಸ್‌ ಸೇರ್ಪಡೆಗೆ ಹಾರ್ದಿಕ್‌ ಪಟೇಲ್‌ ಸಿದ್ಧತೆ

Published:
Updated:

ಅಹ್ಮದಾಬಾದ್: ಪಾಟಿದಾರ್‌ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್‌ ಪಟೇಲ್‌ ಕಾಂಗ್ರೆಸ್‌ ಸೇರಲು ಸಿದ್ಧತೆ ನಡೆಸಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗುಜರಾತ್‌ನ ಜಮ್ನಾಗರ್‌ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ‘ಅಹ್ಮದಾಬಾದ್‌ನಲ್ಲಿ ಮಾರ್ಚ್‌ 12ರಂದು ನಡೆಯಲಿರುವ ಕಾರ್ಯಕಾರಿಣಿ ಸಭೆಯ ವೇಳೆ ನಾನು ಕಾಂಗ್ರೆಸ್‌ ಸೇರಲಿದ್ದೇನೆ ಮತ್ತು ಜಮ್ನಾಗರ್‌ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ’ ಎಂದು ತಿಳಿಸಿದ್ದಾರೆ.

ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿಯ ನೇತಾರರಾಗಿರುವ ಹಾರ್ದಿಕ್, ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಲಿದ್ದಾರೆ.

ಗುಜರಾತ್‌ನಲ್ಲಿ ಪ್ರಬಲವಾಗಿರುವ ಪಾಟೀದಾರ್‌ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿರುವ ಹಾರ್ದಿಕ್‌ ಕಣಕ್ಕಿಳಿಯಲು ಬಯಸಿರುವ ಜಮ್ನಾಗರ್‌ ಕ್ಷೇತ್ರವನ್ನು ಸದ್ಯ ಬಿಜೆಪಿಯ ಪೂನಂಬೇನ್‌ ಮೇಡಂ ಪ್ರತಿನಿಧಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 19

  Happy
 • 0

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !