ಬುಧವಾರ, ಆಗಸ್ಟ್ 21, 2019
28 °C

ಹರ್ಯಾಣದಲ್ಲಿ ಗೋ ರಕ್ಷಕನ ಹತ್ಯೆ, ಹಸುಗಳ್ಳರ ಕೈವಾಡ ಇಲ್ಲ ಎಂದ ಪೊಲೀಸರು

Published:
Updated:

ನವದೆಹಲಿ: ಹರ್ಯಾಣದ ಪಲವಲ್ ಜಿಲ್ಲೆಯಲ್ಲಿ ಸೋಮವಾರ ಸಂಜೆ ಗೋರಕ್ಷಕ ಗೋಪಾಲ್ (35) ಎಂಬವರು ಹತ್ಯೆಯಾಗಿದ್ದಾರೆ.  ಹಸು ಕಳ್ಳಸಾಗಣಿಕೆ ತಡೆಯಲೆತ್ನಿಸಿದಾಗ ಹಸುಗಳ್ಳರು ಗೋಪಾಲ್ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಆದರೆ ಈ ಪ್ರಕರಣದಲ್ಲಿ ಹಸುಗಳ್ಳರ ಕೈವಾಡ ಇಲ್ಲ ಎಂದು ಹರ್ಯಾಣ ಪೊಲೀಸರು ಹೇಳಿದ್ದು ತನಿಖೆ ಮುಂದುವರಿಯುತ್ತಿದೆ ಎಂದಿದ್ದಾರೆ.

ನಾವು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದು, ಇದರಲ್ಲಿ ಹಸುಗಳ್ಳರ ಕೈವಾಡ ಇದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಸಿಗಲಿಲ್ಲ ಎಂದು ಪಲವಲ್ ಎಸ್‌ಪಿ ನರೇಂದ್ರ ಬಿಜರ್ನಿಯಾ ಹೇಳಿದ್ದಾರೆ.

ಪಲವಲ್ ಜಿಲ್ಲೆಯ ಹೋದವ್ ನಗರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ  ಹೋದಲ್ -ನೂಹ್ ಹೈವೆಯಲ್ಲಿ  ಈ ಘಟನೆ ನಡೆದಿತ್ತು.  ಗೋಪಾಲ್ ಅವರು ಗೋರಕ್ಷಕ ತಂಡದ ಸಕ್ರಿಯ ಸದಸ್ಯರಾಗಿದ್ದರು, ಹಸು ಕಳ್ಳಸಾಗಣಿಕೆಯವರು ಅವರ ಮೇಲೆ ಕಣ್ಣಿಟ್ಟಿದ್ದರು. ಸೋಮವಾರ ಸಂಜೆ ನಮ್ಮ ಸಹೋದರನ ಹತ್ಯೆಯಾಗಿದೆ ಎಂಬ ಸಂದೇಶ ಸಿಕ್ಕಿತು ಎಂದು ಗೋಪಾಲ್ ಅವರ ತಮ್ಮ ಜಲ್ವೀರ್ ಹೇಳಿರುವುದಾಗಿ ಎಫ್‌ಐಆರ್‌ನಲ್ಲಿದೆ.

ನಾನು ಮನೆಗೆ ತಲುಪಿದಾಗ ಅವರ ಗುಪ್ತಾಂಗಕ್ಕೆ ಗುಂಡೇಟು ತಗುಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡೆ ಎಂದಿದ್ದಾರೆ ಜಲ್ವೀರ್.  
ಹರ್ಯಾಣ ಸರ್ಕಾರ ಗೋವಂಶ್ ಸಂರಕ್ಷಣ್ ಮತ್ತು ಗೋಸಂವರ್ಧನ್ ಕಾಯ್ದೆ 2015 ತಿದ್ದುಪಡಿ ಮಾಡಿದ ಒಂದು ತಿಂಗಳಲ್ಲೇ ಈ ಘಟನೆ ನಡೆದಿದೆ.

#GopalLynched ಟ್ರೆಂಡಿಂಗ್
ಗೋಪಾಲ್ ಹತ್ಯೆಯನ್ನು ಟ್ವೀಟಿಗರು ಖಂಡಿಸಿದ್ದು  #GopalLynched ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ.

 

Post Comments (+)