ಸೋಮವಾರ, ಮೇ 17, 2021
23 °C

ಹಸೀನಾ–ಸೋನಿಯಾ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಭಾನುವಾರ ಭೇಟಿಯಾಗಿದ್ದಾರೆ. ಸೋನಿಯಾ ಜತೆಗೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಹಿರಿಯ ಮುಖಂಡ ಆನಂದ್‌ ಶರ್ಮಾ ಮತ್ತು ಪ್ರಿಯಾಂಕಾ ಗಾಂಧಿ ಇದ್ದರು.

ಬಾಂಗ್ಲಾದೇಶ ಸ್ಥಾಪಕ ಶೇಖ್‌ ಮುಜೀಬುರ್‌ ರಹಮಾನ್‌ ಅವರ ಜನ್ಮ ಶತಮಾನೋತ್ಸವ ಮತ್ತು ಬಾಂಗ್ಲಾದೇಶ ವಿಮೋಚನೆಯ 50ನೇ ವರ್ಷಾಚರಣೆ ಮುಂದಿನ ವರ್ಷ ನಡೆಯಲಿದೆ. ಇದರಲ್ಲಿ ಭಾಗವಹಿಸುವಂತೆ ಸೋನಿಯಾ ಮತ್ತು ನಿಯೋಗಕ್ಕೆ ಹಸೀನಾ ಈ ಸಂದರ್ಭದಲ್ಲಿ ಆಹ್ವಾನ ನೀಡಿದ್ದಾರೆ. 

ಸೋನಿಯಾ ಮತ್ತು ಹಸೀನಾ ಕುಟುಂಬಗಳ ನಡುವೆ ಇರುವ ವಿಶೇಷ ಬಾಂಧವ್ಯದಿಂದಾಗಿ ಪ್ರಿಯಾಂಕಾ ಅವರು ನಿಯೋಗದ ಜತೆಗೆ ಹೋಗಿದ್ದರು. 1975ರಲ್ಲಿ ಶೇಖ್‌ ಮುಜೀಬುರ್‌ ಅವರ ಹತ್ಯೆಯಾದ ಬಳಿಕ ಹಸೀನಾ ಅವರು ದೇಶಭ್ರಷ್ಟರಾಗಿ ದೆಹಲಿಯಲ್ಲಿ ಸ್ವಲ್ಪ ಕಾಲ ತಂಗಿದ್ದರು. ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಒತ್ತಾಸೆಯಿಂದ ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದರು. ಹಾಗಾಗಿ, ಈ ಕುಟುಂಬಗಳ ನಡುವೆ ವಿಶೇಷ ಸಂಬಂಧ ಇದೆ. 

‘ಹಸೀನಾ ಅವರ ಅಪ್ಪುಗೆ ಬಹಳ ಕಾಲದ ಬಯಕೆಯಾಗಿತ್ತು. ಅವರನ್ನು ಭೇಟಿಯಾಗಲು ತುಂಬಾ ಸಮಯದಿಂದ ಕಾಯುತ್ತಿದ್ದೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ. 

ಸತತ ಮೂರನೇ ಅವಧಿಗೆ ಚುನಾವಣೆ ಗೆದ್ದು ಅಧಿಕಾರಕ್ಕೆ ಏರಿದ ಹಸೀನಾ ಅವರನ್ನು ಸೋನಿಯಾ ಅಭಿನಂದಿಸಿದ್ದಾರೆ.  

ಬಾಂಗ್ಲಾ ವಿಮೋಚನೆಯ ಸುವರ್ಣಮಹೋತ್ಸವವು ವರ್ಷವಿಡೀ ನಡೆಯಲಿದ್ದು ಅದರಲ್ಲಿ ಭಾಗವಹಿಸುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಅವರನ್ನು ಹಸೀನಾ ಆಹ್ವಾನಿಸಿದ್ದಾರೆ. 

ಹಸೀನಾ ಅವರ ನಾಯಕತ್ವದಲ್ಲಿ ಬಾಂಗ್ಲಾದೇಶವು ಸಾಧಿಸಿದ ಆರ್ಥಿಕ ಪ್ರಗತಿಯನ್ನು ಮನಮೋಹನ್‌ ಶ್ಲಾಘಿಸಿದ್ದಾರೆ. ಆರೋಗ್ಯ ಸೇವೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯನ್ನೂ ಅವರು ಉಲ್ಲೇಖಿಸಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು