ಗುರುವಾರ , ಆಗಸ್ಟ್ 22, 2019
21 °C

ಅಯೋಧ್ಯೆ ಪ್ರಕರಣ ನಿತ್ಯ ವಿಚಾರಣೆ 'ಅಮಾನವೀಯ' ಎಂದ ನ್ಯಾಯವಾದಿ

Published:
Updated:

ನವದೆಹಲಿ: ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ನಿತ್ಯ ವಿಚಾರಣೆಯನ್ನು ವಿರೋಧಿಸಿದ ಹಿರಿಯ ನ್ಯಾಯವಾದಿ ಇದು ಅಮಾನವೀಯ, ಈ ರೀತಿ ತ್ವರಿತ ಗತಿಯಲ್ಲಿ ವಿಚಾರಣೆ ನಡೆಯಬಾರದು ಎಂದಿದ್ದಾರೆ.

 ರಾಮಜನ್ಮಭೂಮಿ- ಬಾಬರಿ ಮಸೀದಿ ಪ್ರಕರಣದ ನಾಲ್ಕನೇ ದಿನದ ವಿಚಾರಣೆ ಶುಕ್ರವಾರ ನಡೆದಿದೆ.

ಪ್ರಕರಣದಲ್ಲಿ ಮುಸ್ಲಿಂ ಕಕ್ಷಿದಾರರ ಪರ ವಾದಿಸುತ್ತಿರುವ ನ್ಯಾಯವಾದಿ ರಾಜೀವ್ ಧವನ್, ವಾರದಲ್ಲಿ  5 ದಿನ ವಿಚಾರಣೆ ನಡೆದರೆ ಅದು ಅಮಾನವೀಯ. ನಮಗೆ ನ್ಯಾಯಾಲಯಕ್ಕೆ ಸಹಕರಿಸಲು ಸಾಧ್ಯವಾಗುವುದಿಲ್ಲ. ವಿಚಾರಣೆ ತ್ವರಿತಗತಿಯಲ್ಲಿ ಇರಬಾರದಿತ್ತು.ಇದು ನಾವು ಪ್ರಕರಣದಿಂದ ಹಿಂದೆ ಸರಿಯುವಂತೆ ಒತ್ತಡ ಹೇರುತ್ತದೆ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ, ನಿಮ್ಮ ಮನವಿಯನ್ನು ಆಲಿಸಿದ್ದೇವೆ. ಈ ಬಗ್ಗೆ ಶೀಘ್ರದಲ್ಲಿಯೇ ನಿಮಗೆ ಮಾಹಿತಿ ನೀಡುತ್ತೇನೆ ಎಂದಿದ್ದಾರೆ.

ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದವನ್ನು ಮಧ್ಯಸ್ಥಿಕೆ ಮೂಲಕ ಪರಿಹರಿಸುವ ಪ್ರಯತ್ನ ವಿಫಲವಾದ ಕಾರಣ ಆಗಸ್ಟ್ 6ರಿಂದ ಸುಪ್ರೀಂ ಕೋರ್ಟ್‌ನಲ್ಲಿ ನಿತ್ಯವೂ ಪ್ರಕರಣದ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ: 
ಜನ್ಮಸ್ಥಳ ಕಕ್ಷಿದಾರನಾಗಲು ಸಾಧ್ಯವೇ: ‘ಸುಪ್ರೀಂ’ ಪ್ರಶ್ನೆ 
ಅಯೋಧ್ಯೆ ನಿವೇಶನ ತನ್ನದು: ಅಖಾಡ ಪ್ರತಿಪಾದನೆ

ಅಯೋಧ್ಯೆ ಪ್ರಕರಣ: ಇತ್ಯರ್ಥಕ್ಕೆ ಸಂಧಾನ ಸಮಿತಿ ವಿಫಲ, 6ರಿಂದ ನಿತ್ಯ ವಿಚಾರಣೆ

 

Post Comments (+)