ಭಾನುವಾರ, ಸೆಪ್ಟೆಂಬರ್ 15, 2019
30 °C
ಉತ್ತರಕಾಶಿಯಲ್ಲಿ ನಡೆದ ಘಟನೆ

ಉತ್ತರಾಖಂಡ | ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

Published:
Updated:
Prajavani

ಡೆಹ್ರಾಡೂನ್ (ಉತ್ತರಕಾಶಿ): ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಪ್ರವಾಹ ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಖಾಸಗಿ ಹೆಲಿಕಾಪ್ಟರ್‌ವೊಂದು ತಿಕೋಜಿ ಬಳಿಯ ನದಿದಡದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. 

ಹೆಲಿಕಾಪ್ಟರ್ ಭಾಗಶಃ ಹಾನಿಗೀಡಾಗಿದ್ದು, ಪೈಲಟ್ ಮತ್ತು ಸಹ ಪೈಲಟ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. 

ಆರ್ಯನ್ ಏವಿಯೇಷನ್‌ಗೆ ಸೇರಿದ ಹೆಲಿಕಾಪ್ಟರ್ ಚಿವಾ ಪ್ರದೇಶಕ್ಕೆ ಪರಿಹಾರ ಸಾಮಾಗ್ರಿಗಳನ್ನು ಕೊಂಡೊಯ್ಯುತ್ತಿತ್ತು. ಮಾರ್ಗಮಧ್ಯೆದಲ್ಲಿ ಹೆಲಿಕಾಪ್ಟರ್ ತಿಕೋಜಿ ಸಮೀಪದ ನಾಗಾವಾಡದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಉತ್ತರಕಾಶಿಯ ಜಿಲ್ಲಾಧಿಕಾರಿ ಆಶೀಶ್ ಚೌಹಾನ್ ತಿಳಿಸಿದ್ದಾರೆ. 

ಪರಿಹಾರ ಸಾಮಾಗ್ರಿ ಒದಗಿಸಿ ಹಿಂತಿರುಗುತ್ತಿದ್ದ ಖಾಸಗಿ ಹೆಲಿಕಾಪ್ಟರ್‌ವೊಂದು ಮೋಲ್ಡಿ ಬಳಿ ಅಪಘಾತಕ್ಕೀಡಾಗಿ ಮೂವರು ಸಾವನ್ನಪ್ಪಿದ್ದ ಘಟನೆಯ ಎರಡು ದಿನಗಳ ನಂತರ ಈ ಘಟನೆ ನಡೆದಿದೆ.

Post Comments (+)