‘ಮಾನವ ಕಳ್ಳಸಾಗಣೆ ತಡೆ ಮಸೂದೆ ಅಂಗೀಕಾರ ನಿರೀಕ್ಷೆ’

7

‘ಮಾನವ ಕಳ್ಳಸಾಗಣೆ ತಡೆ ಮಸೂದೆ ಅಂಗೀಕಾರ ನಿರೀಕ್ಷೆ’

Published:
Updated:

ನವದೆಹಲಿ: ಮಾನವ ಕಳ್ಳಸಾಗಾಣಿಕೆ ತಡೆ ಪ್ರಸ್ತಾವಿತ ಮಸೂದೆ ಈ ಬಾರಿ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಅಂಗೀಕಾರಗೊಳ್ಳುವ ನಿರೀಕ್ಷೆ ಇದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ತಿಳಿಸಿದ್ದಾರೆ. 

ಬಲವಂತವಾಗಿ ಕಾರ್ಮಿಕರ ಬಳಿ ದುಡಿಸಿಕೊಳ್ಳುವುದು, ಬಲವಂತದ ಭಿಕ್ಷಾಟನೆ, ವಿವಾಹ ಸಹ ಈ ಪ್ರಸ್ತಾವಿತ ಮಸೂದೆ ಅಡಿಯಲ್ಲಿ ಬರಲಿವೆ.

ಇದರ ಪ್ರಕಾರ ಸಂತ್ರಸ್ತರು, ಸಾಕ್ಷಿಗಳು ಹಾಗೂ ದೂರುದಾರರ ಗೋಪ್ಯತೆ ಕಾಪಾಡಲಾಗುತ್ತದೆ ಹಾಗೂ ಕಾಲಮಿತಿಯೊಳಗೆ ವಿಚಾರಣೆ ಪೂರ್ಣಗೊಳಿಸಲಾಗುತ್ತದೆ.

ಮಕ್ಕಳೊಂದಿಗೆ ಸಂವಹನ
ಶಾಲಾ ಮಕ್ಕಳೊಂದಿಗೆ ಸಂವಹನ ನಡೆಸಿದ ಮೇನಕಾ ಗಾಂಧಿ, ಬಿಡುಗಡೆಗೆ ಸಿದ್ಧವಾಗಿರುವ ತಮ್ಮ ಪುಸ್ತಕದ ಕುರಿತು ಮಾಹಿತಿ ಹಂಚಿಕೊಂಡರು. ಮಕ್ಕಳ ಭೀತಿಯ ನಿರ್ವಹಣೆ ಹೇಗೆ ಎನ್ನುವ ಬಗ್ಗೆ ಅವರು ರಚಿಸಿ ರುವ 'There's a Monster Under my Bed! and Other Terrible Terrors' ಪುಸ್ತಕ ಜನವರಿಯಲ್ಲಿ ಬಿಡು ಗಡೆಯಾಗುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !