ನವದೆಹಲಿ: ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್‍ನಲ್ಲಿದ್ದ ಉಗ್ರರ ಶಿಬಿರಗಳ ಮೇಲೆ ವಾಯುದಾಳಿ ಮಾಡಿದ ದಿನ ಪ್ರಧಾನಿ ನರೇಂದ್ರ ಮೋದಿ ಇಡೀ ರಾತ್ರಿ ನಿದ್ದೆ ಮಾಡದೆ ಎಚ್ಚರವಿದ್ದರು. ಈ ವಿಷಯವನ್ನು ಮೋದಿಯವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಎಬಿಪಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೋದಿ, ಮುಂಜಾನೆ 3.40ಕ್ಕೆ ಸೇನೆಯ ಕಾರ್ಯಾಚರಣೆ ಮುಗಿದು ಸೇನೆ ಸುರಕ್ಷಿತವಾಗಿ ವಾಪಸ್ ಬಂದಿದೆ ಎಂದು ಮಾಹಿತಿ ಸಿಕ್ಕಿತು.ನಾನು ನಿದ್ದೆ ಮಾಡಲಿಲ್ಲ, ಈ ಕಾರ್ಯಾಚರಣೆ ಬಗ್ಗೆ ಏನಾದರೂ ಸುದ್ದಿಯಿದೆಯೇ ಎಂದು ನಾನು ಇಂಟರ್ನೆಟ್‍ನಲ್ಲಿ ಹುಡುಕಾಡುತ್ತಾ ಕುಳಿತೆ.