ಬಾಲಕಿಯರ ಮೇಲುಗೈ: ಇಬ್ಬರಿಗೆ ಶೇ 100 ಅಂಕ

ಶನಿವಾರ, ಮೇ 25, 2019
22 °C
ಐಸಿಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ

ಬಾಲಕಿಯರ ಮೇಲುಗೈ: ಇಬ್ಬರಿಗೆ ಶೇ 100 ಅಂಕ

Published:
Updated:

ನವದೆಹಲಿ: ಐಸಿಎಸ್‌ಇಯ 10 ಹಾಗೂ 12ನೇ ತರಗತಿ ಪರೀಕ್ಷಾ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಇದೇ ಮೊದಲ ಬಾರಿಗೆ, 12ನೇ ತರಗತಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಕೋಲ್ಕತ್ತದ ದೇವಾಂಗ ಕುಮಾರ್‌ ಅಗರವಾಲ್ ಹಾಗೂ ಬೆಂಗಳೂರಿನ ವಿಭಾ ಸ್ವಾಮಿನಾಥನ್‌ ಶೇ 100 ಅಂಕಗಳಿಸಿರುವ ಪ್ರತಿಭಾವಂತರು.

‘10ನೇ ತರಗತಿಯಲ್ಲಿ ಬಾಲಕಿಯರ ತೇರ್ಗಡೆ ಪ್ರಮಾಣ ಶೇ 99.05ರಷ್ಟಿದ್ದರೆ, ಶೇ 98.12ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ’ ಎಂದು ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾಮಿನೇಷನ್ಸ್‌ನ (ಸಿಐಎಸ್‌ಸಿಇ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಾರ್ಯದರ್ಶಿ ಗೆರ್ರಿ ಅರಾಥೂನ್‌ ತಿಳಿಸಿದ್ದಾರೆ.

10ನೇ ತರಗತಿ ವಿದ್ಯಾರ್ಥಿಗಳಾದ ಮುಂಬೈನ ಜೂಹಿ ರೂಪೇಶ್‌ ಕಜಾರಿಯಾ, ಮುಖ್ತಾರ್‌ನ ಮನಹರ್ ಬನ್ಸಾಲ್‌ (ಶೇ 99.60 ಅಂಕ) ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಹತ್ತು ವಿದ್ಯಾರ್ಥಿಗಳು 2ನೇ ರ‍್ಯಾಂಕ್‌ ಹಂಚಿಕೊಂಡಿದ್ದು, ಇವರು ಗಳಿಸಿರುವ ಅಂಕ ಶೇ 99.40. ಶೇ 99.20 ಅಂಕ ಗಳಿಸಿರುವ 24 ವಿದ್ಯಾರ್ಥಿಗಳು ಮೂರನೇ ರ‍್ಯಾಂಕ್‌ ಹಂಚಿಕೊಂಡಿದ್ದಾರೆ.

12ನೇ ತರಗತಿಯಲ್ಲಿ ಬಾಲಕಿಯರ ತೇರ್ಗಡೆ ಪ್ರಮಾಣ ಶೇ 97.84 ಹಾಗೂ ಬಾಲಕರ ತೇರ್ಗಡೆ ಪ್ರಮಾಣ ಶೇ 95.40ರಷ್ಟಿದೆ. 16 ವಿದ್ಯಾರ್ಥಿಗಳು ಶೇ 99.75 ಅಂಕ ಗಳಿಸಿ 2ನೇ ರ‍್ಯಾಂಕ್‌ ಹಂಚಿಕೊಂಡಿದ್ದರೆ, ಶೇ 99.50 ಅಂಕ ಗಳಿಸಿರುವ 36 ವಿದ್ಯಾರ್ಥಿಗಳು 3ನೇ ರ‍್ಯಾಂಕನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ವಿದೇಶದಲ್ಲಿರುವ ಶಾಲೆಗಳು ಸಹ ಶೇ 100ರಷ್ಟು ಫಲಿತಾಂಶ ದಾಖಲಿಸಿವೆ.

ಇನ್ನು, ಸಿಐಎಸ್‌ಸಿಇನ ಪಶ್ಚಿಮ ವಲಯದ ಉತ್ತೀರ್ಣ ಪ್ರಮಾಣ ಶೇ 99.73ರಷ್ಟಾಗಿದ್ದರೆ, ದಕ್ಷಿಣ ವಲಯ– ಶೇ 99.73, ಪೂರ್ವ ವಲಯ– ಶೇ 98.06 ಹಾಗೂ ಉತ್ತರ ವಲಯದ ಉತ್ತೀರ್ಣ ಪ್ರಮಾಣ ಶೇ 97.87ರಷ್ಟಾಗಿದೆ ಎಂದು ಅರಾಥೂನ್‌ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !