ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಮೆರಿಟ್ ಆಧಾರದಲ್ಲಿ ನೇಮಕ: ‘ಸುಪ್ರೀಂ’

Last Updated 6 ಜನವರಿ 2020, 18:27 IST
ಅಕ್ಷರ ಗಾತ್ರ

ನವದೆಹಲಿ: ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರ ಆಯ್ಕೆಗೆ ಮುಖ್ಯ ಮಾನದಂಡವಾಗಿ ಮೆರಿಟ್‌ ಅನ್ನು ಪರಿಗಣಿಸದಿದ್ದರೆ ಈ ಸಂಸ್ಥೆಗಳು ಇತರೆ ಸಂಸ್ಥೆಗಳಿಗಿಂತಲೂ ಹಿಂದುಳಿಯಬೇಕಾದಿತು ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟತು.

ಸರ್ಕಾರಿ ಅನುದಾನಿತ ಮದರಸಾಗಳಿಗೆ ಶಿಕ್ಷಕರ ಆಯ್ಕೆಗೆ ಆಯೋಗ ರಚಿಸಲು ಅವಕಾಶ ಕಲ್ಪಿಸುವ ಪಶ್ಚಿಮ ಬಂಗಾಳದ ಕಾಯ್ದೆಯ ಸಿಂಧುತ್ವವನ್ನು ಕೋರ್ಟ್ ಎತ್ತಿಹಿಡಿಯಿತು.

‘ಮೆರಿಟ್ ಮತ್ತು ಕೌಶಲವನ್ನು ಹೊರತುಪಡಿಸಿದ ಯಾವುದೇ ಹಾದಿ ಈ ಸಂಸ್ಥೆಗಳನ್ನು ಪರಿಣಾಮಕಾರಿಯಾಗಿಸುವುದಿಲ್ಲ’ ಎಂದು 151 ಪುಟಗಳ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿತು. ಕಾಯ್ದೆಯ ಅನುಸಾರ ರಚನೆಯಾದ ಆಯೋಗ ಮಾಡುವ ಬೋಧಕರ ಆಯ್ಕೆ ಮತ್ತು ನೇಮಕವು ರಾಷ್ಟ್ರೀಯ ಹಾಗೂ ಈ ಸಂಸ್ಥೆಗಳ ಹಿತಾಸಕ್ತಿಗೆ ಪೂರಕವಾಗಿಯೇ ಇರುತ್ತದೆ ಎಂದು ಕೋರ್ಟ್‌ ಪ್ರತಿಪಾದಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT