ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಟಿ ಕಾನ್ಪುರ: ವಿದ್ಯಾರ್ಥಿಗಳವಿರುದ್ಧ ತನಿಖೆ

Last Updated 2 ಜನವರಿ 2020, 22:47 IST
ಅಕ್ಷರ ಗಾತ್ರ

ಕಾನ್ಪುರ (ಉತ್ತರ ಪ್ರದೇಶ): ಪಾಕಿಸ್ತಾನ ಮೂಲದ ಕವಿ ಫೈಜ್‌ ಅಹ್ಮದ್‌ ಫೈಜ್‌ ಅವರ ‘ಹಮ್‌ ದೇಖೇಂಗೆ’ ಕವಿತೆಯನ್ನು, ವಿದ್ಯಾರ್ಥಿಗಳು ಕ್ಯಾಂಪಸ್‌ ಒಳಗಡೆ ವಾಚಿಸಿದ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ ಎಂದು ಐಐಟಿ ಕಾನ್ಪುರದ ಉಪನಿರ್ದೇಶಕ ಮಣೀಂದ್ರ ಅಗರ್‌ವಾಲ್‌ ತಿಳಿಸಿದ್ದಾರೆ.

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಬೆಂಬಲವಾಗಿ, ಡಿ.17ರಂದು ಐಐಟಿ ಕಾನ್ಪುರದ 300ಕ್ಕೂ ಅಧಿಕ ವಿದ್ಯಾರ್ಥಿಗಳು ಸಂಸ್ಥೆಯ ಆವರಣದೊಳಗೆ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಈ ಕವಿತೆ ವಾಚಿಸಿದ್ದ. ಇದರ ವಿರುದ್ಧ ಪ್ರಾಧ್ಯಾಪಕ ಡಾ.ವಾಶಿಮಂತ್‌ ಶರ್ಮಾ, ಕೆಲ ವಿದ್ಯಾರ್ಥಿಗಳು ದೂರು ಸಲ್ಲಿಸಿದ್ದರು.

ಸುಳ್ಳು ಸುದ್ದಿ: ‘ಫೈಜ್‌ ಅವರ ಕವಿತೆ ಹಿಂದೂ ವಿರೋಧಿಯೇ ಎನ್ನುವುದನ್ನು ನಿರ್ಧರಿಸಲು ಐಐಟಿ ಕಾನ್ಪುರ ಸಮಿತಿ
ಯೊಂದನ್ನು ರಚಿಸಿದೆ ಎಂದು ಉಲ್ಲೇಖಿಸಿ ಕೆಲ ಮಾಧ್ಯಮಗಳು ವರದಿ ಮಾಡುತ್ತಿವೆ. ಇದು ಸುಳ್ಳು ಮಾಹಿತಿ’ ಎಂದು ಸಂಸ್ಥೆಯ ನಿರ್ದೇಶಕ ಅಭಯ್‌ ಕರಂಡಿಕರ್‌ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT