ಪಾಕ್‌ ವಿದೇಶಾಂಗ ಸಚಿವರ ಜತೆಗಿನ ಮಾತುಕತೆ ರದ್ದುಪಡಿಸಿದ ಭಾರತ

7
ಪೊಲೀಸರ ಹತ್ಯೆ, ಉಗ್ರ ಬುರ್ಹಾನ್‌ ವಾನಿ ವೈಭವೀಕರಿಸುವ ಅಂಚೆಚೀಟಿ ಬಿಡುಗಡೆಗೆ ವಿರೋಧ

ಪಾಕ್‌ ವಿದೇಶಾಂಗ ಸಚಿವರ ಜತೆಗಿನ ಮಾತುಕತೆ ರದ್ದುಪಡಿಸಿದ ಭಾರತ

Published:
Updated:

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರಾದ ಸುಷ್ಮಾ ಸ್ವರಾಜ್‌ ಮತ್ತು ಶಾ ಮೆಹಮೂದ್‌ ಖುರೇಷಿ ನಡುವೆ ಮುಂದಿನ ವಾರ ನ್ಯೂಯಾರ್ಕ್‌ನಲ್ಲಿ ನಡೆಯಬೇಕಿದ್ದ ಸಭೆಯನ್ನು ರದ್ದುಪಡಿಸಲಾಗಿದೆ. ಕಾಶ್ಮೀರದಲ್ಲಿ ಮೂವರು ಪೊಲೀಸರ ಹತ್ಯೆ ಮತ್ತು ಕಾಶ್ಮೀರದ ಉಗ್ರ ಬುರ್ಹಾನ್‌ ವಾನಿಯನ್ನು ವೈಭವೀಕರಿಸುವ ಅಂಚೆಚೀಟಿ ಬಿಡುಗಡೆಯನ್ನು ಖಂಡಿಸಿ ಮಾತುಕತೆಯನ್ನು ರದ್ದು ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಮನೆಯಿಂದಲೇ ಅಪಹರಿಸಿ 3 ಪೊಲೀಸರ ಹತ್ಯೆ​

‘ಇಂತಹ ವಾತಾವರಣದಲ್ಲಿ ಪಾಕಿಸ್ತಾನದ ಜತೆಗೆ ಮಾತುಕತೆ ನಡೆಸುವುದರಲ್ಲಿ ಅರ್ಥವೇ ಇಲ್ಲ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ. 

ಪಾಕಿಸ್ತಾನ ತನ್ನ ರೀತಿಯನ್ನು ಬದಲಿಸಿಕೊಳ್ಳುವುದಿಲ್ಲ ಎಂಬುದಕ್ಕೆ ಪೊಲೀಸರ ಹತ್ಯೆ ಮತ್ತು ಉಗ್ರನ ವೈಭವೀಕರಣ ಸ್ಪಷ್ಟ ಪುರಾವೆಗಳು ಎಂದು ಅವರು ತಿಳಿಸಿದ್ದಾರೆ. 

ಮಂದಿನ ವಾರ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಎರಡೂ ದೇಶಗಳ ವಿದೇಶಾಂಗ ಸಚಿವರ ಸಭೆ ನಡೆಸಲು ಉದ್ದೇಶಿಸಲಾಗಿತ್ತು. ವಿದೇಶಾಂಗ ಸಚಿವರ ಭೇಟಿಗೆ ಪಾಕಿಸ್ತಾನ ಕೋರಿತ್ತು. ಭಾರತ ಅದಕ್ಕೆ ಗುರುವಾರವಷ್ಟೇ ಒಪ್ಪಿಗೆ ಸೂಚಿಸಿತ್ತು.

ಇನ್ನಷ್ಟು...

ವಿದೇಶಾಂಗ ಸಚಿವರ ಮಟ್ಟದ ಮಾತುಕತೆಗೆ ಇಮ್ರಾನ್ ಖಾನ್ ಒಲವು: ಪ್ರಧಾನಿ ಮೋದಿಗೆ ಪತ್ರ​

‘ಡಿಯರ್‌ ಮೋದಿ’– ಹೀಗೆಂದು ಪಾಕ್ ಪ್ರಧಾನಿ ಇಮ್ರಾನ್‌ ಬರೆದ ಪತ್ರದಲ್ಲಿ ಏನಿದೆ?

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !