ನವದೆಹಲಿ: ದೇಶದ 130 ಕೋಟಿ ಜನರು ಭಾನುವಾರರಾತ್ರಿ 9 ಗಂಟೆಗೆ ಒಗ್ಗಟ್ಟು ತೋರಿಸಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶದ ಎಲ್ಲ ಸ್ತರದ ಜನರು ಜತೆಯಾಗಿ ನಿಂತಿದ್ದಾರೆ. ಲಾಕ್‍ಡೌನ್ ವೇಳೆ ಜನರು ತೋರಿಸಿದ ಶಿಸ್ತು ಪ್ರಶಂಸನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಿಜೆಪಿ ಪಕ್ಷದ 40ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಸೋಮವಾರ ಟ್ವಿಟರ್ ಲೈವ್ ಮೂಲಕ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ, ಜನತಾ ಕರ್ಫ್ಯೂ ಅಥವಾಲಾಕ್‍ಡೌನ್ ಆಗಿರಲಿ ಜನರು ಒಗ್ಗಟ್ಟಾಗಿ ನಿಂತಿದ್ದಾರೆ. ದೇಶದ 130 ಕೋಟಿ ಜನರು ತೋರಿಸಿದ ಪ್ರಬುದ್ಧತೆ ಶ್ಲಾಘನೀಯ ಎಂದು ಹೇಳಿದ್ದಾರೆ. ದೇಶದ ಜನರು ಇಷ್ಟೊಂದು ಶಿಸ್ತಿನಿಂದ ಇದನ್ನು ಪಾಲಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ ಎಂದ ಅವರುಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಹಚ್ಚಿ ಜನರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ನಿನ್ನೆ ನಾವುದೇಶದ ಜನರ ಒಗ್ಗಟ್ಟಿನ ಝಲಕ್ ನೋಡಿದ್ದೇವೆ. ಗ್ರಾಮ, ಮಹಾ ನಗರಗಳ ಜನರು ಕೊರೊನಾ ವೈರಸ್‌ನ ಅಂಧಕಾರವನ್ನು ಹೊಡೆದೋಡಿಸಲು ದೀಪ ಹಚ್ಚಿದ್ದಾರೆ. 130 ಕೋಟಿ ಜನರ ಈ ದೊಡ್ಡ ಹೆಜ್ಜೆ ಸುದೀರ್ಘ ಹೋರಾಟವೊಂದಕ್ಕೆ ನಮ್ಮನ್ನು ಸಜ್ಜು ಮಾಡಿದೆ. ಇದೀಗನಮ್ಮ ದೇಶದ ದಿಶೆ ಮತ್ತು ಉದ್ದೇಶ ಒಂದೇ ಆಗಿದೆ ಎಂದಿದ್ದಾರೆ.

ಕೋವಿಡ್ ವಿರುದ್ಧ ರಾಜ್ಯ ಸರ್ಕಾರಗಳ ಹೋರಾಟವನ್ನು ನಾನು ಮೆಚ್ಚುತ್ತೇನೆ. ಈ ಹೋರಾಟಕ್ಕೆ ಭಾರತ ಕೈಗೊಂಡ ಕಾರ್ಯಗಳು ಜಗತ್ತಿಗೆ ಮಾದರಿಯಾಗಿವೆ.ಭಾರತ ತುಂಬಾ ಜಾಣತನದ ಹೆಜ್ಜೆಯನ್ನಿರಿಸುತ್ತಿದ್ದು ಇದಕ್ಕೆ ರಾಜ್ಯ ಸರ್ಕಾರಗಳು ಸಹಾಯ ಮಾಡಿವೆ. ಆನಂತರವೇ ನಾವು ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಹಲವಾರು ರಾಷ್ಟ್ರಗಳು ನಮ್ಮನ್ನು ಕೊಂಡಾಡಿವೆ ಎಂದು ಮೋದಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.