ಗುರುವಾರ , ಜುಲೈ 29, 2021
20 °C

Covid-19 | ದೇಶದಲ್ಲಿ 3 ಲಕ್ಷ ಪ್ರಕರಣ: ನಾಲ್ಕನೇ ಸ್ಥಾನಕ್ಕೆ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ಶುಕ್ರವಾರ ರಾತ್ರಿ 3 ಲಕ್ಷದ ಗಡಿಯನ್ನು ಸಮೀಪಿಸಿದೆ. ಪ್ರತಿದಿನ ಪತ್ತೆಯಾಗುವ ಹೊಸ ಪ್ರಕರಣಗಳ ಸಂಖ್ಯೆ ಜೂನ್‌ ತಿಂಗಳಲ್ಲಿ ಭಾರಿ ಏರಿಕೆ ಕಂಡಿದೆ.

ಜೂನ್‌ನ ಆರಂಭದ 11 ದಿನಗಳಲ್ಲಿ ಸರಾಸರಿ 9,300 ಪ್ರಕರಣಗಳು ಪತ್ತೆಯಾಗಿವೆ. 12ನೇ ದಿನ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 2 ಲಕ್ಷದಿಂದ 3 ಲಕ್ಷ ತಲುಪಲು ತೆಗೆದುಕೊಂಡ ಅವಧಿ ಕೇವಲ 11 ದಿನಗಳು.

11 ದಿನಗಳಲ್ಲಿ ಲಕ್ಷ ಪ್ರಕರಣ
108 ದಿನಗಳು: 
1 ಲಕ್ಷ ಪ್ರಕರಣಗಳು ಪತ್ತೆಯಾಗಲು ತೆಗೆದುಕೊಂಡ ಅವಧಿ
14 ದಿನಗಳು: 1–2 ಲಕ್ಷ ಪ್ರಕರಣಗಳು ಪತ್ತೆಯಾಗಲು ತೆಗೆದುಕೊಂಡ ಅವಧಿ
11 ದಿನಗಳು: 2–3 ಲಕ್ಷ ಪ್ರಕರಣಗಳು ಪತ್ತೆಯಾಗಲು ತೆಗೆದುಕೊಂಡ ಅವಧಿ

ಸ್ಪೇನ್‌, ಬ್ರಿಟನ್ ಹಿಂದಿಕ್ಕಿದ ಭಾರತ
* ಸ್ಪೇನ್‌ ಮತ್ತು ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಒಟ್ಟು ಪ್ರಕರಣಗಳಿಗಿಂತ ಭಾರತದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ
* ಅತಿಹೆಚ್ಚು ಪ್ರಕರಣಗಳು ಪತ್ತೆಯಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತವು, ಗುರುವಾರದವರೆಗೂ 6ನೇ ಸ್ಥಾನದಲ್ಲಿತ್ತು
* ಶುಕ್ರವಾರ ಒಂದೇ ದಿನದಲ್ಲಿ ಸ್ಪೇನ್‌ ಮತ್ತು ಬ್ರಿಟನ್ ಅನ್ನು ಹಿಂದಿಕ್ಕಿರುವ ಭಾರತವು, 4ನೇ ಸ್ಥಾನಕ್ಕೆ ಬಂದಿದೆ

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು