ಮಹತ್ವದ ಬೆಳವಣಿಗೆ: ‘ಎಸ್‌–400’ ಖರೀದಿ ಒಪ್ಪಂದಕ್ಕೆ ಭಾರತ–ರಷ್ಯಾ ಸಹಿ

7

ಮಹತ್ವದ ಬೆಳವಣಿಗೆ: ‘ಎಸ್‌–400’ ಖರೀದಿ ಒಪ್ಪಂದಕ್ಕೆ ಭಾರತ–ರಷ್ಯಾ ಸಹಿ

Published:
Updated:
Deccan Herald

ನವದೆಹಲಿ:  ಭಾರತ ಮತ್ತು ರಷ್ಯಾ ಶುಕ್ರವಾರ ಎಸ್–400 ಟ್ರಯಂಫ್ ವಾಯುಪ್ರದೇಶ ರಕ್ಷಣಾ ಕ್ಷಿಪಣಿ (ಏರ್‌ಡಿಫೆನ್ಸ್ ಸಿಸ್ಟಂ) ಖರೀದಿ ಒಪ್ಪಂದಕ್ಕೆ ಸಹಿಹಾಕಿದವು. ₹40 ಸಾವಿರ ಕೋಟಿ ಮೊತ್ತದ ಈ ಒಪ್ಪಂದದಿಂದ ಭಾರತದ ರಕ್ಷಣಾ ವ್ಯವಸ್ಥೆಗೆ ಹೊಸ ಬಲ ಬಂದಂತೆ ಆಗಿದೆ.

ಭಾರತ–ರಷ್ಯಾ ನಡುವಣ 19ನೇ ದ್ವಿಪಕ್ಷೀಯ ಸಮಾವೇಶ ನಗರದ ಹೈದರಾಬಾದ್‌ ಹೌಸ್‌ನಲ್ಲಿ ಆರಂಭವಾಗಿದೆ. ರಷ್ಯದ ಭದ್ರತಾ ಉಪಕರಣಗಳ ಉತ್ಪಾದಕರ ಮೇಲೆ ಅಮೆರಿಕ ದಿಗ್ಬಂಧನ ವಿಧಿಸಿರುವ ಹಿನ್ನೆಲೆಯಲ್ಲಿ ಈ ಸಮಾವೇಶ ಮಹತ್ವ ಪಡೆದುಕೊಂಡಿದೆ. 400 ಕಿ.ಮೀ. ಅಂತರದಲ್ಲಿಯೇ ವೈರಿ ದೇಶಗಳ ಕ್ಷಿಪಣಿ, ವಿಮಾನ ಮತ್ತು ಮಾನವರಹಿತ ಹಾರುವ ಯಂತ್ರಗಳನ್ನು ನಾಶಪಡಿಸಬಲ್ಲ, ಸುಮಾರು ₹40 ಸಾವಿರ ಕೋಟಿ ಮೌಲ್ಯದ ಎಸ್–400 ಏರ್‌ಡಿಫೆನ್ಸ್ ಸಿಸ್ಟಂ ಖರೀದಿ ಒಪ್ಪಂದದ ಬಗ್ಗೆಯೇ ಎಲ್ಲರ ಗಮನ ಕೇಂದ್ರೀಕೃತವಾಗಿತ್ತು.

ರಷ್ಯಾದೊಂದಿಗೆ ಮಿಲಿಟರಿ ಒಪ್ಪಂದ ಮಾಡಿಕೊಳ್ಳುವ ಯಾವುದೇ ದೇಶವು ಪರೋಕ್ಷ ದಿಗ್ಬಂಧನ ಎದುರಿಸಬೇಕಾಗಬಹುದು ಎನ್ನುವ ಅಮೆರಿಕದ ಬೆದರಿಕೆ ಹಿನ್ನೆಲೆಯಲ್ಲಿ ಈ ಮಾತುಕತೆ ಮಹತ್ವ ಪಡೆದುಕೊಂಡಿದೆ. ಅಮೆರಿಕದ ಹಿತಾಸಕ್ತಿಗಳಿಗೆ ಧಕ್ಕೆಯುಂಟು ಮಾಡುವ ಬೆಳವಣಿಗೆಗಳನ್ನು ನಿವಾರಿಸಿಕೊಳ್ಳಲು ಅಮೆರಿಕ ಬಳಿ ‘ಕಾಟ್ಸಾ’ (Countering America's Adversaries through Sanctions Act- CAATSA) ಅಸ್ತ್ರವಿದೆ. ರಷ್ಯದಿಂದ ಶಸ್ತ್ರಾಸ್ತ್ರ ಖರೀದಿ ಒಪ್ಪಂದ ಮಾಡಿಕೊಳ್ಳುವ ದೇಶಗಳ ವಿರುದ್ಧ ಅಮೆರಿಕ ಈ ಅಸ್ತ್ರ ಪ್ರಯೋಗಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಎಸ್‌–400 ಒಪ್ಪಂದ ಕುತೂಹಲ ಕೆರಳಿಸಿತ್ತು.

ಇದನ್ನೂ ಓದಿ: ಪುಟಿನ್ ಭಾರತ ಭೇಟಿ; ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಕಿರಿಕಿರಿ

‘ಯಾವುದೇ ಒಪ್ಪಂದವು ಅಮೆರಿಕ ಅಥವಾ ಅದರ ಮೈತ್ರಿ ದೇಶಗಳ ಹಿತಾಸಕ್ತಿಗಳಿಗೆ ಧಕ್ಕೆಯುಂಟು ಮಾಡುವುದಿಲ್ಲ. ಖರೀದಿದಾರರು ರಕ್ಷಣಾ ಉಪಕರಣಗಳ ಆಮದು ಪ್ರಮಾಣ ಕಡಿಮೆ ಮಾಡುತ್ತಿದ್‌ದಾರೆ ಮತ್ತು ರಷ್ಯದ ಮೇಲಿನ ಅವಲಂಬನೆಯಿಂದ ಬಿಡಿಸಿಕೊಳ್ಳುತ್ತಿದ್ದಾರೆ’ ಎನ್ನುವ ಖಾತ್ರಿ ಇದ್ದರೆ ಅಮೆರಿಕದ ಅಧ್ಯಕ್ಷರು ದಿಗ್ಬಂಧನದಿಂದ ರಿಯಾಯ್ತಿ ಕೊಡಬಹುದು. ಭಾರತ ಈ ಮೂರೂ ಷರತ್ತುಗಳನ್ನು ಪೂರೈಸುವುದರಿಂದ ಭಾರತಕ್ಕೆ ಅಮೆರಿಕ ಆರ್ಥಿಕ ದಿಗ್ಬಂಧನದಿಂದ ರಿಯಾಯ್ತಿ ಸಿಗಬಹುದು ಎಂಬ ಆಶಾಭಾವನೆ ವ್ಯಕ್ತವಾಗಿದೆ.

ಮಾತುಕತೆ ಸಂದರ್ಭ ಭಾರತ ಮತ್ತು ರಷ್ಯ ₹20 ಸಾವಿರ ಕೋಟಿ ಮೊತ್ತದ ದಾಳಿ ಯುದ್ಧನೌಕೆಗಳನ್ನು ಖರೀದಿಸುವ ಒಪ್ಪಂದಕ್ಕೂ ಸಹಿಹಾಕುವ ಸಾಧ್ಯತೆ ಇದೆ. ಈ ಪೈಕಿ ಎರಡು ಯುದ್ಧನೌಕೆಗಳು ಉಕ್ರೇನ್ ಪೂರೈಸಲಿರುವ ಗ್ಯಾಸ್‌ ಟರ್ಬೈನ್‌ ಎಂಜಿನ್ ಹೊಂದಿರಲಿವೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಇರಾನ್‌ನಿಂದ ತೈಲ ಆಮದು ದಿಗ್ಬಂಧನ ಸೇರಿದಂತೆ ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳನ್ನು ಚರ್ಚಿಸಲಿದ್ದಾರೆ. ಕಳೆದ ಮೇ ತಿಂಗಳಲ್ಲಿ ರಷ್ಯದ ಸೋಚಿ ನಗರದಲ್ಲಿ ಇಬ್ಬರೂ ನಾಯಕರು ಪರಸ್ಪರ ಅನೌಪಚಾರಿಕವಾಗಿ ಭೇಟಿಯಾಗಿದ್ದರು. ಈ ಭೇಟಿಯ ಮುಂದುವರಿದ ಭಾಗವಾಗಿ ಈ ಸಮಾವೇಶ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 29

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !