ಶುಕ್ರವಾರ, ಜುಲೈ 1, 2022
25 °C

ಅಸಂಪ್ಷನ್‌ನಲ್ಲಿ ನೌಕಾನೆಲೆ; ಭಾರತ –ಸೆಷೆಲ್ಸ್ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡ್ಯಾನಿ ಫೌರೆಗೆ ಪ್ರಧಾನಿ ನರೇಂದ್ರ ಮೋದಿ ಡಾರ್ನಿಯರ್ ವಿಮಾನದ ಮಾದರಿಯ ಉಡುಗೊರೆ ನೀಡಿದರು –ಪಿಟಿಐ ಚಿತ್ರ

ನವದೆಹಲಿ: ಆಫ್ರಿಕಾ ಖಂಡದ ಸೆಷೆಲ್ಸ್‌ ದೇಶದ ಅಸಂಪ್ಷನ್ ದ್ವೀಪದಲ್ಲಿ ಭಾರತ ಮತ್ತು ಸೆಷೆಲ್ಸ್‌ ಸಹಭಾಗಿತ್ವದಲ್ಲಿ ನೌಕಾನೆಲೆ ಸ್ಥಾಪಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ.

2015ರಲ್ಲೇ ನೌಕಾನೆಲೆ ಅಭಿವೃದ್ಧಿಗೆ ಎರಡೂ ದೇಶಗಳು ಒಪ್ಪಿಗೆ ಸೂಚಿಸಿದ್ದವು. ಆದರೆ ಬೇರೆ–ಬೇರೆ ಕಾರಣಗಳಿಂದಾಗಿ ಯೋಜನೆ ಆರಂಭವಾಗಿರಲಿಲ್ಲ. ‘ಅಸಂಪ್ಷನ್ ದ್ವೀಪದಲ್ಲಿ ನೌಕಾನೆಲೆಯನ್ನು ನಾವೇ ಏಕಾಂಗಿಯಾಗಿ ಅಭಿವೃದ್ಧಿಪಡಿಸುತ್ತೇವೆ. ಅದಕ್ಕಾಗಿ ಭಾರತದ ಜತೆ ಕೈಜೋಡಿಸುವುದಿಲ್ಲ’ ಎಂದು ಸೆಷೆಲ್ಸ್ ಜೂನ್ 17ರಂದು ಹೇಳಿಕೆ ನೀಡಿತ್ತು. ಹೀಗಾಗಿ ಈ ಯೋಜನೆ ರದ್ದಾಯಿತು ಎಂದೇ ವಿಶ್ಲೇಷಿಸಲಾಗಿತ್ತು.

ಆರು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಬಂದಿರುವ ಸೆಷೆಲ್ಸ್ ಅಧ್ಯಕ್ಷ ಡ್ಯಾನಿ ಫೌರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮಧ್ಯೆ ಸೋಮವಾರ ಇಲ್ಲಿ ನಡೆದ ಮಾತುಕತೆಯ ನಂತರ ನೌಕಾನೆಲೆ ಯೋಜನೆಗೆ ಮತ್ತೆ ಚಾಲನೆ ಸಿಕ್ಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು