ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವದೇಶಿ ನಿರ್ಮಿತ ಕೆ 4 ಕ್ಷಿಪಣಿ ಯಶಸ್ವಿ ಪ್ರಯೋಗಾರ್ಥ ಪರೀಕ್ಷೆ

Last Updated 20 ಜನವರಿ 2020, 5:59 IST
ಅಕ್ಷರ ಗಾತ್ರ

ವಿಶಾಖಪಟ್ಟಂ: 3,500 ಕಿ.ಮೀ. ದೂರಕ್ಕೆ ದಾಳಿ ನಡೆಸಬಲ್ಲ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಅತ್ಯಂತ ಶಕ್ತಿಶಾಲಿಕ್ಷಿಪಣಿ ಶೌರ್ಯದ (ಕೆ4)ಪ್ರಯೋಗಾರ್ಥ ಉಡಾವಣೆಯನ್ನು ಭಾರತ ಯಶ್ವಸಿಯಾಗಿ ನಡೆದಿದೆ.

ಡಿಆರ್‌ಡಿಒ ಅಭಿವೃದ್ಧಿ ಪಡಿಸಿರುವ ಈ ಕ್ಷಿಪಣಿಯನ್ನು ಆಂಧ್ರಪ್ರದೇಶದ ಕಡಲತಡಿಯಿಂದ ಭಾನುವಾರ ಬೆಳಿಗ್ಗೆ ಪರೀಕ್ಷಾರ್ಥ ಉಡಾವಣೆಯನ್ನು ಯಾವುದೇ ತೊಂದರೆಯಿಲ್ಲದೆ ನಡೆಸಲಾಯಿತು.

ಕೆ ಸರಣಿಯ ಕ್ಷಿಪಣಿಗಳಲ್ಲಿ ಒಂದಾಗಿರುವ ಇದು ಭಾರತದ ರಕ್ಷಣಾ ಸಾಮರ್ಥ್ಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುಲಿದೆ.ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾದ ಅಣ್ವಸ್ತ್ರ ಸಜ್ಜಿತ ಜಲಾಂತರ್ಗಾಮಿ ಐಎನ್‌ಎಸ್‌ ಅರಿಹಂತ್‌ಗಾಗಿಯೇ ಡಿಆರ್‌ಡಿಒ ಇದನ್ನು ಅಭಿವೃದ್ಧಿ ಪಡಿಸಿದೆ.

ಐಎನ್ಎಸ್ ಅರಿಹಂತ್‌ಗೆ ಖಂಡಾಂತರ ಕ್ಷಿಪಣಿ ಅಗ್ನಿ–3ರನ್ನು ಅಳವಡಿಸಿಕೊಳ್ಳುವ ಪ್ರಯತ್ನದಲ್ಲಿ ತೊಂದರೆಗಳನ್ನು ಉಂಟಾದ ನಂತರ ಕೆ4 ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕ್ಷಿಪಣಿ 1.3 ಮೀಟರ್ ವ್ಯಾಸ,12 ಮೀಟರ್ ಉದ್ದವಿದೆ. ಇದರ ತೂಕ ಸುಮಾರು 17 ಟನ್ ಆಗಿದೆ.2,500 ಕೆಜಿ ತೂಕದ ಅಣ್ವಸ್ತ್ರ ಸಿಡಿತಲೆಯ ಇದು ಸಾಗಿಸಬಲ್ಲದು.

2016ರಲ್ಲಿ ಈ ಕ್ಷಿಪಣಿಯನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂ ಕರಾವಳಿಯಿಂದಐಎನ್ಎಸ್ ಅರಿಹಂತ್‌ನಿಂದಮೊದಲ ಬಾರಿಗೆ ಪರೀಕ್ಷೆ ನಡೆಸಲಾಗಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕ್ಷಿಪಣಿಯನ್ನು ಪರೀಕ್ಷೆ ನಡೆಸಲು ಯೋಚಿಸಲಾಗಿತ್ತು. ಆದರೆ, ಚಂಡಮಾರುತದ ಕಾರಣ ಅದನ್ನು ಮುಂದೂಡಲಾಗಿತ್ತು.

ಸೇವೆಯಲ್ಲಿರುವ ಭಾರತದ ಏಕೈಕ ಪರಮಾಣು ಜಲಾಂತರ್ಗಾಮಿ ಐಎಎಸ್‌ ಅರಿಹಂತ್‌ 2018ರ ನವೆಂಬರ್‌ನಲ್ಲಿಮೊದಲ ‘ದಾಳಿ ತಡೆ ಗಸ್ತ’ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಆಗ ಅದರಲ್ಲಿ ಸಾಗರಿಕಾ ಕೆ15 ಕ್ಷಿಪಣಿ ಇತ್ತು. ಈ ಕ್ಷಿಪಣಿಗಿಂತ ಹೆಚ್ಚಿನ ಸಾಮರ್ಥ್ಯವನ್ನು ಕೆ4 ಶೌರ್ಯ ಕ್ಷಿಪಣಿ ಹೊಂದಿದೆ. ಈ ರೀತಯ 12 ಕ್ಷಿಪಣಿಗಳನ್ನು ಹೊತ್ತೊಯುವ ಸಾಮರ್ಥ್ಯ ಅರಿಹಂತ್‌ಗೆ ಇದೆ.

ಕೇವಲ 750 ದೂರಕ್ಕೆ ದಾಳಿ ನಡೆಸಬಲ್ಲಕೆ15 ಕ್ಷಿಪಣಿಯು ಅರಬ್ಬಿ ಸಮುದ್ರದ ಮೂಲಕ ಪಾಕಿಸ್ತಾನದ ಕೆಲವು ನಗರಗಳನ್ನು ಮಾತ್ರ ತಲುಪುತ್ತಿತ್ತು. ಇದಕ್ಕೆಲ್ಲ ಪರಿಹಾರವಾಗಿ ಕೆ4 ಕ್ಷಿಪಣಿ ಅಭಿವೃದ್ಧಿಪಡಿಸಲಾಗಿದ್ದು, ಎರಡು ಬಾರಿ ಪರೀಕ್ಷೆ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT