ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಾಕೋಟ್‌ ದಾಳಿ: ವಾಯುಪ್ರದೇಶದ ಮೇಲಿನ ನಿರ್ಬಂಧ ತೆರವು

Last Updated 1 ಜೂನ್ 2019, 18:28 IST
ಅಕ್ಷರ ಗಾತ್ರ

ನವದೆಹಲಿ: ಬಾಲಾಕೋಟ್‌ ಮೇಲೆ ವಾಯುದಾಳಿನಡೆಸಿದ ನಂತರ ಭಾರತೀಯ ವಾಯುಪ್ರದೇಶದ ಮೇಲೆ ವಿಧಿಸಿದ್ದ ಎಲ್ಲ ತಾತ್ಕಾಲಿಕ ನಿರ್ಬಂಧಗಳನ್ನು ಭಾರತೀಯ ವಾಯುಪಡೆ ತೆರವುಗೊಳಿಸಿದೆ.

ವಾಣಿಜ್ಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶ ತೆರವುಗೊಳಿಸಲು ಪಾಕಿಸ್ತಾನಕ್ಕೆ ಸೂಚಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ವಾರ ಪಾಕಿಸ್ತಾನದ ನಾಗರಿಕ ವಿಮಾನಯಾನ ಇಲಾಖೆ ಅಧಿಕಾರಿಗಳು ತಮ್ಮ ವಾಯುಪ್ರದೇಶದ ಮೇಲೆ ಹೇರಿರುವ ನಿರ್ಬಂಧವನ್ನು ಜೂನ್‌ 14ರ ವರೆಗೆ ವಿಸ್ತರಿಸಿದ್ದಾರೆ.

ಬಾಲಾಕೋಟ್‌ನಲ್ಲಿದ್ದ ಜೈಶ್‌ –ಎ– ಮೊಹಮ್ಮದ್‌ ಉಗ್ರರ ಶಿಬಿರಗಳ ಮೇಲೆ ಭಾರತೀಯ ಪಾಯುಪಡೆ ನಡೆಸಿದ ದಾಳಿ ನಂತರ ಕಳೆದ ಫೆಬ್ರುವರಿ 27 ರಿಂದ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ಬಂದ್‌ ಮಾಡಿತ್ತು. ನವದೆಹಲಿ, ಬ್ಯಾಂಕಾಕ್‌ ಮತ್ತು ಕ್ವಾಲಾಲಂಪುರ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಸಂಚರಿಸುವ ವಿಮಾನಗಳಿಗೆ ಮಾತ್ರ ಪಾಕಿಸ್ತಾನ ಮಾರ್ಚ್‌ 27 ರಿಂದ ತನ್ನ ವಾಯುಪ್ರದೇಶವನ್ನು ಬಳಕೆಗೆ ಮುಕ್ತಗೊಳಿಸಿತ್ತು.

‘ಫೆಬ್ರುವರಿ 27 ರಿಂದ ಭಾರತೀಯ ವಾಯುಪ್ರದೇಶದ ಮೇಲೆ ವಿಧಿಸಿದ್ದ ಎಲ್ಲ ತಾತ್ಕಾಲಿಕ ನಿರ್ಬಂಧವನ್ನು ಈಗ ತೆರವುಗೊಳಿಸಲಾಗಿದೆ’ ಎಂದು ಭಾರತೀಯ ವಾಯುಪಡೆ ಶುಕ್ರವಾರ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT